IPL ನಲ್ಲಿ 100 ವಿಕೆಟ್ ಪಡೆದ ಸುನಿಲ್ ನರೈನ್ : ಟ್ವಿಟರ್ ನಲ್ಲಿ ಅಭಿಮಾನಿಗಳಿಂದ ಪ್ರಶಂಸೆ

ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಫ್ ಸ್ಪಿನ್ ಬೌಲರ್ ಸುನೀಲ್ ನರೈನ್ ಐಪಿಎಲ್ ಟೂರ್ನಿಯಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ನಡುವೆ ನಡೆದ ಟಿ20 ಪಂದ್ಯದಲ್ಲಿ ನರೈನ್, ಕ್ರಿಸ್ ಮಾರಿಸ್ ಅವರನ್ನು ಬೋಲ್ಡ್ ಮಾಡಿ 100ನೇ ವಿಕೆಟ್ ಪಡೆದರು.

ಈ ಮೂಲಕ ಸುನಿಲ್ ನರೈನ್ ಐಪಿಎಲ್ ಇತಿಹಾಸದಲ್ಲಿ 100 ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿದ್ದಾರೆ. ಇದಕ್ಕೂ ಮುನ್ನ ವೇಗದ ಬೌಲರ್ ಲಸಿತ್ ಮಾಲಿಂಗಾ ಹಾಗೂ ಆಫ್ ಸ್ಪಿನ್ನರ್ ಹರಭಜನ್ ಸಿಂಗ್, 100 ಐಪಿಎಲ್ ವಿಕೆಟ್ ಪಡೆದ ಬೌಲರ್ ಗಳಾಗಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com