UP : 8 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ : ಕುಡಿದ ನಶೆಯಲ್ಲಿ ಕೃತ್ಯ ಎಸಗಿದ ಯುವಕ

ಜಮ್ಮು ಕಾಶ್ಮೀರದ ಕಠುವಾ, ಗುಜರಾತಿನ ಸೂರತ್ ನಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ, ಕೊಲೆಗಳ ನಂತರ ಮತ್ತೊಂದು ಅಂತಹುದೇ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಇಟಾದಲ್ಲಿ ಸೋಮವಾರ ಸಾಯಂಕಾಲ ನಡೆದಿದೆ. 18 ವರ್ಷದ ಯುವಕನೊಬ್ಬ ಕುಡಿದ ನಶೆಯಲ್ಲಿ ಬಲಾತ್ಕಾರ ಮಾಡಿ, ಆಕೆಯನ್ನು ಹತ್ಯೆಗೈದಿದ್ದಾನೆ.

ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಮೃತ ಬಾಲಕಿಯ ಪರಿವಾರ ಆಗಮಿಸಿತ್ತು. ಬಾಲಕಿಯ ಪೋಷಕರು ಮದುವೆಯ ಕಾರ್ಯಕ್ರಮದಲ್ಲಿ ಮಗ್ನರಾಗಿದ್ದರು. ಮಧ್ಯಾಹ್ನ 1.30 ರ ಸುಮಾರಿಗೆ ಯುವಕ ಆಕೆಯನ್ನು ಪಕ್ಕದಲ್ಲೇ ಇದ್ದ ಅರ್ಧ ಕಟ್ಟಲ್ಪಟ್ಟಿರುವ ಕಟ್ಟಡಕ್ಕೆ ಎಳೆದೊಯ್ದಿದ್ದಾನೆ.

ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಬಾಲಕಿಯ ಶವದ ಪಕ್ಕದಲ್ಲಿ ಕುಡಿದ ಮತ್ತಿನಲ್ಲಿಯೇ ಬಿದಿದ್ದ ಆತನನ್ನು ಪೋಲೀಶರು ಬಂಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com