ಡಾಕ್ಟರ್‌ ಕೆಲಸ ಬಿಟ್ಟು ಬಂದಿದ್ದಾನೆ, ಅವನನ್ನು ಗೆಲ್ಲಿಸಿ : ಯತೀಂದ್ರ ಪರ CM ಮತಯಾಚನೆ

ಮೈಸೂರು : ಸಿಎಂ ಸಿದ್ದರಾಮಯ್ಯ ಇಂದು ಮಗ ಯತೀಂದ್ರ ಪರವಾಗಿ ಮತಯಾಚನೆ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನೂ ಮಣ್ಣಿನ ಮಗ, ನನಗೂ ರೈತರ ಸಮಸ್ಯೆ ಅರ್ಥವಾಗುತ್ತದೆ. ಮಣ್ಣಿನ ಮಗನಿಗೆ ಮತ ಹಾಕುತ್ತಿರೋ ? ಅವನ್ಯಾರಿಗೋ ಮತ ಹಾಕುತ್ತೀರೋ ನೀವೇ ಯೋಚನೆ ಮಾಡಿ ಎಂದಿದ್ದಾರೆ.

ಚಾಮುಂಡೇಶ್ವರಿ ಮತ್ತು ವರುಣಾ ಎರಡು ನನ್ನ ಕಣ್ಣಿದ್ದಂತೆ. ನನ್ನನ್ನು ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಮಾಡಿದ ಕೀರ್ತಿ ವರುಣಾಗೆ ಸಲ್ಲುತ್ತದೆ.
ಆದ್ರೆ ಈ ಬಾರಿ ನಾನು ಇಲ್ಲಿ ನಿಲ್ತಿಲ್ಲ. ಪಕ್ಕದಲ್ಲಿ ನಿಲ್ತಿದ್ದೇನೆ ಹಾಗಂತ ವರುಣಾವನ್ನು ಮೆರೆಯೋದಿಲ್ಲ. ನಿಮಗೆ ಅವಮಾನ ಆಗುವ ರೀತಿ ನಡೆದುಕೊಂಡಿಲ್ಲ.‌ ನನ್ನನ್ನು ಆರಿಸಿದ್ದಕ್ಕೆ ನಿಮಗೆ ಯಾವತ್ತು ಅಗೌರವ ತಂದಿಲ್ಲ. ಹೀಗಾಗಿ ಈ ಬಾರಿ ನನ್ನಂತೇಯೆ ನನ್ನ ಮಗನಿಗೂ ಆಶೀರ್ವಾದ ಮಾಡಿ. 30 ಸಾವಿರಕ್ಕಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ನಾನು ಎಲ್ಲಾ ಹಳ್ಳಿಗಳಿಗೂ ಬರಲು ಸಾಧ್ಯವಿಲ್ಲ. ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ನಾನು ಹೋಗಬೇಕಿದೆ.ಆದರೆ ಪುತ್ರ ಯತೀಂದ್ರ ಎಲ್ಲಾ ಹಳ್ಳಿ, ಬೀದಿಗೂ ಬರುತ್ತಾನೆ. ನೀವು ಯತೀಂದ್ರ ಗೆ ಆಶೀರ್ವಾದ ಮಾಡಬೇಕು.  ವರುಣಾ ಕ್ಷೇತ್ರ ಬಿಟ್ಟು ಹೋಗಲು ನನಗೆ ನೋವಾಗುತ್ತದೆ. ಪಕ್ಕದ ಮನೆಯಲ್ಲೇ ನಾನು ಇರುತ್ತೇನೆ. ನಿಮ್ಮ ಕಷ್ಟ ಸುಖದಲ್ಲಿ ನಾನು ಭಾಗಿಯಾಗುತ್ತೇನೆ ಎಂದಿದ್ದಾರೆ.

ಬಿಜೆಪಿ ಮಂದಿ ಡೋಂಗಿಗಳು.  ಸಬ್ ಕಾ ಸಾಥ್ ಸಬ್‌ ಕಾ ವಿಕಾಸ್ ಅಂತಾ ಬಿಜೆಪಿಯವ್ರು ಹೇಳ್ತಾರೆ.  ನಾವು ಅದನ್ನ ಮಾಡಿ ತೋರಿಸಿದ್ದೇವೆ. ಸಂವಿಧಾನದ ಬದಲಾಯಿಸುತ್ತೇವೆ ಅಂತಾ ಬಿಜೆಪಿ ಮಂದಿ ಹೇಳ್ತಾರೆ. ಬಿಜೆಪಿ ಡೊಂಗಿಗಳಿಗೆ ನೀವು ಪಾಠ ಕಲಿಸಿ ಎಂದಿದ್ದಾರೆ.

One thought on “ಡಾಕ್ಟರ್‌ ಕೆಲಸ ಬಿಟ್ಟು ಬಂದಿದ್ದಾನೆ, ಅವನನ್ನು ಗೆಲ್ಲಿಸಿ : ಯತೀಂದ್ರ ಪರ CM ಮತಯಾಚನೆ

Leave a Reply

Your email address will not be published.

Social Media Auto Publish Powered By : XYZScripts.com