ತಂದೆಗೆ ತಕ್ಕ ಮಗ ಎನಿಸಿಕೊಂಡ ದರ್ಶನ್‌ : ಪ್ರಚಾರದ ವೇಳೆ ಪುಟ್ಟಣ್ಣಯ್ಯ ಪುತ್ರ ಮಾಡಿದ್ದೇನು ?

ಮಂಡ್ಯ : ರೈತನಾಯಕ, ಜನಾನುರಾಗಿ ಎಂದೇ ಕರೆಸಿಕೊಳ್ಳುತ್ತಿದ್ದ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ತಂದೆಯಂತೆಯೇ ದರ್ಶನ್‌ ಸಹ ರೈತರ ಪರವಾಗಿ, ಜನಗಳ ಕಷ್ಟ ಸುಖಕ್ಕೆ ಸ್ಪಂದಿಸುತ್ತಿದ್ದು, ಪ್ರಚಾರಕ್ಕೆ ಹೋದ ವೇಳೆ ಮೃತರ ಶವ ಕಂಡು ಅದನ್ನು ಹೊತ್ತುಕೊಂಡು ಹೋಗಿದ್ದಾರೆ.

ಇಂದು ದರ್ಶನ್‌ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದರು. ಈ ವೇಳೆ ಪಾಂಡವಪುರದ ಹರಳಹಳ್ಳಿ ಗ್ರಾಮದಲ್ಲಿ ಕೃಷ್ಣೇಗೌಡ ಎಂಬುವವರು ಸಾವಿಗೀಡಾಗಿದ್ದರು. ಅಲ್ಲದೆ ಅವರ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆಂದು ಕೊಂಡೊಯ್ಯಲಾಗುತ್ತಿತ್ತು. ಇದನ್ನು ನೋಡಿ ಮರುಗಿದ ದರ್ಶನ್‌ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಲ್ಲದೆ, ಮೃತರ ಶವವನ್ನು ಹೊತ್ತು ಸಾಗಿದ್ದು, ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.

 

ಸಾವಿನ ಮನೆಗೆ ತೆರಳಿ ಸಾಂತ್ವನ ಹೇಳುತ್ತಿರುವ ದರ್ಶನ್‌ ಅವರ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು, ಇವರ ಕೆಲಸ ನೋಡಿ ತಂದೆಗೆ ತಕ್ಕ ಮಗ ಎಂದು ಹಾಡಿ ಹೊಗಳುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com