ವಿದೇಶಕ್ಕೆ ತೆರಳಲು ಸಲ್ಮಾನ್‌ ಖಾನ್‌ಗೆ ಅನುಮತಿ ನೀಡಿದ ಕೋರ್ಟ್‌

ಜೋಧ್‌ಪುರ : ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಶಿಕ್ಷೆಗೊಳಗಾಗಿ ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ನಟ ಸಲ್ಮಾನ್‌ ಖಾನ್‌ ವಿದೇಶಿ ಪ್ರವಾಸಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.

ಈ ಹಿಂದೆ ಜಾಮೀನು ನೀಡುವ ವೇಳೆ ನ್ಯಾಯಾಲಯ 10 ಸಾವಿರ ರೂ ದಂಡ ವಿಧಿಸಿದ್ದಲ್ಲದೆ, ವಿದೇಶಿ ಪ್ರಯಾಣ ಮಾಡದಂತೆ ಷರತ್ತು ವಿಧಿಸಿತ್ತು. ಆದರೆ ಸಲ್ಮಾನ್‌ ಖಾನ್‌ ವಿದೇಶಕ್ಕೆ ಹೋಗಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸಲ್ಮಾನ್‌ ಖಾನ್‌ ವಿದೇಶಕ್ಕೆ ತೆರಳಲು  ಸಮ್ಮತಿ ಸೂಚಿಸಿದೆ. ಮೇ 25ರಿಂದ ಜುಲೈ 10ರವರೆಗೆ ಕೆನಡಾ, ನೇಪಾಳ ಹಾಗೂ ಅಮೆರಿಕ ದೇಶಗಳಿದೆ ಸಲ್ಮಾನ್ ತೆರಳಲಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com