ವೋಟ್ ಕೇಳಲು ಹೋದ ಕೈ ನಾಯಕ : ಜನರ ಪ್ರಶ್ನೆಗೆ ಬೆದರಿ ಕಾಲ್ಕಿತ್ತ ಸಚಿವ

ಕಳೆದ ಕೆಲ ದಿನಗಳಿಂದ ಹಾಸನ ಡಿ.ಸಿ ರೋಹಿಣಿ ಸಿಂಧೂರಿ ಅವರ ವಿಚಾರದಲ್ಲಿ ಮುಖಭಂಗ ಅನುಭವಿಸಿದ್ದ ಸಚಿವ ಎ.ಮಂಜು ಮತಯಾಚನೆಗೆಂದು ಹೋದ ವೇಳೆ ಜನರಿಂದ ಅವಮಾನ ಎದುರಿಸಿದ್ದಾರೆ.

ಹೌದು ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿದ್ದಾರೆ. ಅದೇ ರೀತಿ ಸಚಿವ ಎ. ಮಂಜು ಸಹ ಅರಕಲಗೋಡು ಪಟ್ಟಣದ 13ನೇ ವಾರ್ಡ್‌ನ ಕೊಲ್ಲೂರಿನಲ್ಲಿ ಮತ ಕೇಳಲು ಹೋದಾಗ, ಅಲ್ಲಿನ ಜನ ಮಂಜು ಅವರ ಮುಖ ನೋಡುತ್ತಿದ್ದಂತೆಯೇ ಆಕ್ರೋಶಗೊಂಡಿದ್ದು, ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ನಮ್ಮ ಗ್ರಾಮದಲ್ಲಿ ಅದ್ಯಾವ ಅಭಿವೃದ್ಧಿ ಮಾಡಿದ್ದೀರಿ ಎಂಬುದನ್ನು ಮೊದಲು ತೋರಿಸಿ, ಹತ್ತು ವರ್ಷದಿಂದ ನಾಪತ್ತೆಯಾಗಿದ್ದವರು ಈಗ ಬಂದಿದ್ದೀರ, ನಮ್ಮ ವಾರ್ಡ್‌ಗಾಗಿ ನೀವು ಮಾಡಿರುವ ಕೆಲಸವೇನು ಹೇಳಿ…ಏನೂ ಮಾಡದೆ ಈಗ ಮತಕೇಳಲು ಬಂದಿದ್ದೀರಾ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಇದರಿಂದ ತಬ್ಬಿಬ್ಬಾದ ಮಂಜು ಅಲ್ಲಿಂದ ಕಾಲ್ಕಿತ್ತಿದ್ದು, ಅದ್ಯಾಕೋ ಮಂಜು ಅವರ ಗ್ರಹಚಾರ ಕೆಟ್ಟಂತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com