ಆಸಿಫಾಳ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ನಿಜಕ್ಕೂ ಖುಷಿ ವಿಚಾರ ಎಂದ RSS ಕಾರ್ಯಕರ್ತ !!

ತಿರುವನಂತಪುರಂ : ಇತ್ತೀಚೆಗಷ್ಟೇ ದೇವಸ್ಥಾನದಲ್ಲೇ ಕಾಮುಕರು 8 ವರ್ಷದ ಬಾಲಕಿ ಆಸಿಫಾಳ ಮೇಲೆ ಅತ್ಯಾಚಾರವೆಸಗಿ ಬಳಿಕ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದರ ಕುರಿತು ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಮಧ್ಯೆ ಕೇರಳದ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಹಿನ್ನೆಲೆಯುಳ್ಳ ಕುಟುಂಬದ ವ್ಯಕ್ತಿಯೊಬ್ಬ ಆಸಿಫಾಳ ಹತ್ಯೆಯಾಗಿದ್ದು ಸರಿ ಎಂದಿದ್ದಾನೆ.

ವಿಷ್ಟು ನಂದಕುಮಾರ್‌ ಎಂಬಾತ ಆಸಿಫಾಳ ಸಾವನ್ನ ವಿಜೃಂಭಿಸಿ ಆಕೆಗೆ ಸರಿಯಾಗಿಯೇ ಮಾಡಿದ್ದಾರೆ. ಇಲ್ಲದಿದ್ದರೆ ಅವಳು ಬೆಳೆದು ದೊಡ್ಡವಳಾದ ಮೇಲೆ ದೇಶಕ್ಕೆ ಬಾಂಬ್‌ ಹಾಕುತ್ತಿದ್ದಳು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ. ಇದು ಆರ್‌ಎಸ್‌ಎಸ್‌ನ ಮನಸ್ಥಿತಿಯನ್ನು ತಿಳಿಸುತ್ತದೆ ಎಂದು ಕೇರಳ ಸೇರಿದಂತೆ ಅನೇಕ ಕಡೆ ಈ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಈತ ಕೇರಳದ ಕೊಟ್ಟಾಯಂನ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಪಾಲಿವ್ಯಾಟಂ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಈತ ತನ್ನ ಫೇಸ್‌ಬುಕ್‌ನಲ್ಲಿ ಆಸಿಫಾ ವಿರುದ್ಧ ಪೋಸ್ಟ್ ಹಾಕಿದ ಬಳಿಕ ಅನೇಕರು ಈತನನ್ನು ಕೆಲಸದಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿರುವ ಬ್ಯಾಂಕ್‌ ನ ಹಿರಿಯ ಅಧಿಕಾರಿಗಳು ಕೆಲಸದಲ್ಲಿ ನಿರೀಕ್ಷಿತ ಮಟ್ಟ ತಲುಪದ ವಿಷ್ಮು ನಂದಕುಮಾರ್‌ನನ್ನು ಏಪ್ರಿಲ್‌ 11ರಂದು ಕೆಲಸದಿಂದ ತೆಗೆದುಹಾಕಿದ್ದೇವೆ. ಇಂತಹ ಕೀಳುಮಟ್ಟದ ಪೋಸ್ಟನ್ನು ಯಾರೇ ಮಾಡಿದರೂ ಅದನ್ನು ನಾವು ಖಂಡಿಸುತ್ತೇವೆ ಎಂದು ಟ್ವೀಟ್‌ ಮಾಡಿದೆ.

ಈ ವಿಚಾರ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ವಿಷ್ಣು ನಂದಕುಮಾರ್‌ ತನ್ನ ಫೇಸ್‌ಬುಕ್‌ ಪೋಸ್ಟನ್ನು ಡಿಲೀಟ್ ಮಾಡಿದ್ದಾನೆ.

Leave a Reply

Your email address will not be published.