ಬಂಡಾಯದ ನೆಲ ನರಗುಂದದಲ್ಲಿ BJP- ಕಾಂಗ್ರೆಸ್‌ ಮಧ್ಯೆ ಫೈಟ್‌ : ಯಾರಿಗೆ ದಕ್ಕಲಿದೆ ಗದಗ ?

ಗದಗ ಜಿಲ್ಲೆಯ ಮತ್ತೊಂದು ಕ್ಷೇತ್ರ ನರಗುಂದ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರವೂ ಸಹ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿದ್ದು, ಅನುಭವಿ ಹಾಗೂ ಹಿರಿಯ ಮುತ್ಸದ್ದಿ, ಸಚಿವರಾಗಿ ಅನುಭವ ಹೊಂದಿರೋ ಬಿ ಆರ್ ಯಾವಗಲ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎಲ್ಲರಂತೆ ಇವರೂ ಸಹ ತಾವು ಮಾಡಿರೋ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಈಗಾಗಲೇ ಇವರಿಗೇ ಮತ್ತೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಲ್ಲದೆ ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ಇವರು ಈವರೆಗೂ ತಂದಿರೋ 2000 ಕೋಟಿ ಅನುದಾನದ ಕೆಲಸಗಳೇ ಇವರಿಗೆ ಶ್ರೀರಕ್ಷೆಯಾಗಬಹುದು.

ಇವರಿಗೆ ಪ್ರಬಲ ಪೈಪೋಟಿ ನೀಡೋದಕ್ಕೆ ಮಾಜಿ ಸಚಿವ ಬಿಜೆಪಿಯ ಸಿ ಸಿ ಪಾಟೀಲ್ ಸಹ ತಯಾರಾಗ್ತಿದ್ದಾರೆ. 2003 ರ ಚುನಾವಣೆಯಲ್ಲಿ ಇವರಿಗೆ ಬಿ ಆರ್ ಯಾವಗಲ್‌ ವಿರುದ್ದ ಕಣಕ್ಕಿಳಿದು ಬಹುಮತವನ್ನು ಪಡೆದಿದ್ದರು ಅವರು ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಮಾಡಿದ್ದು ಅವನೆಲ್ಲಾ ಜನರ ಮನದಲ್ಲಿ ಊಳಿದಿದ್ದರೆ ಈ ಬಾರಿ ಶಾಸಕರಾದರೂ ಆಗಬಹುದು. ಹೀಗಾಗೀ ಈ ಬಾರಿ ನರಗುಂದ ಕ್ಷೇತ್ರದ ಚುನಾವಣಾ ಕಣವೂ ಸಹ ರಂಗೇರುವುದರಲ್ಲಿ ಯಾವುದೇ ಅನುಮಾನವಿಲ್ಲ.

ನರಗುಂದ-ಜಾತಿವಾರು ಮತಗಳು.

ನರಗುಂದ ಕ್ಷೇತ್ರದಲ್ಲಿ 46520 ಪಂಚಮಸಾಲಿ, 5010 ಬ್ರಾಹ್ಮಣ, 15139 ಗಾಣಿಗ, ಬಣಜಿಗ 12437, ಲಿಂಗಾಯತ ರೆಡ್ಡಿ 4158, ಸಾದರ ಲಿಂಗಾಯತ 1174, ಜಂಗಮ 3899, ಜೈನರು, 381, ವೈಶ್ಯರು 824, ಮರಾಠರು 4665, ಕುರುಬ 27835, ಭಾವಕ್ಷತ್ರಿಯ 946, ಮುಸ್ಲಿಂ 19948, ಕ್ರೈಸ್ತ 127, ಪರಿಶಿಷ್ಟ ಜಾತಿ (ಎಸ್.ಸಿ) 18148, ಪರಿಶಿಷ್ಟ ವರ್ಗ 7749, ಇತರೇ 15367 ಮತದಾರರಿದ್ದು ಈ ಬಾರಿಯ ಚುನಾವಣೆಯಲ್ಲಿಯೂ ಲಿಂಗಾಯತ ಮತಗಳೇ ಫಲಿತಾಂಶ ನಿರ್ಧರಿಸಲಿವೆ.

ಹಾಲಿ ಎಂಎಲ್‍ಎ ಬಿ ಆರ್ ಯಾವಗಲ್, ಕಾಂಗ್ರೆಸ್ ಪಕ್ಷ.
ಒಟ್ಟು ಮತತದಾರರು- 184895
ಪುರುಷ ಮತದಾರರು- 93436
ಮಹಿಳಾ ಮತದಾರರು- 91455

ಕಾಂಗ್ರೆಸ್ ಪಕ್ಷಕ್ಕೆ ಗೆಲುವಿಗೆ ಪೂರಕವಾಗಬಹುದಾದ ಅಂಶಗಳು

1.ಈಗಿನ ಶಾಸಕ ಬಿ ಆರ್ ಯಾವಗಲ್ ಸಂಭಾವಿತರು, ಶುದ್ಧಹಸ್ತದ ರಾಜಕಾರಣಿ, ಜನರಿಗೆ ಸುಲಭವಾಗಿ ಸಿಗ್ತಾರೆ ಕಡೇಪಕ್ಷ  ದೂರವಾಣಿಯಲ್ಲಾದ್ರೂ ದೊರಕುತ್ತಾರೆ ಎನ್ನುವುದು ಪ್ಲಸ್ ಪಾಯಿಂಟ್.
2.2017 ರಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಹಣದ ಹೊಳೆಯನ್ನೇ ಹರಿಸಿದ್ದಾರೆ.
3.ರೈತಾಪಿ ವರ್ಗಕ್ಕೆ ಅನುಕೂಲವಾಗುವಂತ 5 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡದ ದಾಖಲೆ ನಿರ್ಮಾಣ, 450 ಕ್ಕೂ ಹೆಚ್ಚು ಕಿಮೀ ನಮ್ಮ ಹೊಲ ನಮ್ಮ ರಸ್ತೆ ನಿರ್ಮಾಣ.
4.ನರಗುಂದ ಪಟ್ಟಣಕ್ಕೆ ಸುಮಾರು 68 ಕೋಟಿ ರೂಪಾಯಿಗಳ 24/7 ಕುಡಿಯೋ ನೀರಿನ ಯೋಜನೆಗೆ ಚಾಲನೆ, ಮಲಪ್ರಭಾ ಕಾಲುವೆಗಳ ಆಧುನೀಕರಣಕ್ಕಾಗಿ 1120 ಕೋಟಿ ರೂಪಾಯಿಗಳ ಯೋಜನೆಗೆ ಚಾಲನೆ.
5.ಪಕ್ಷದಲ್ಲಿ ಯಾರೊಂದಿಗೂ ಮನಸ್ಥಾಪಕ್ಕೆ ಅವಕಾಶವೇ ಇಲ್ಲದಂತೆ, ಹಿಡಿತ ಸಾಧಿಸಿರುವುದು.

ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯಾಗುವ ಅಂಶಗಳು

1.ಶಾಸಕ ಬಿ ಆರ್ ಯಾವಗಲ್ ಅವರ ಅಧಿಕಾರವನ್ನು ಸಂಬಂಧಿಕರು ದುರ್ಬಳಕೆ ಮಾಡಿಕೊಳ್ತಿದ್ದಾರೆನ್ನೋ ಆರೋಪ.
2.ಕೆಲಸದ ಕಡೆ ನೀಡೋ ಕಾಳಜಿ ಸಂಘಟನೆಯಲ್ಲಿ ನೀಡಲ್ಲ ಎನ್ನೋ ಅಂಶ.
3. ಪ್ರಮುಖವಾಗಿ ಈ ಭಾಗದ ಬಹುದಿನಗಳ ಹೋರಾಟ ಮಹದಾಯಿ ನದಿಯನ್ನು ಮಲಪ್ರಭೆಗೆ ಕೂಡಿಸೋ ಹೋರಾಟಕ್ಕೆ ಸ್ಪಂದಿಸಿಲ್ಲ ಎನ್ನೋ ಆರೋಪ. ಸಿಎಂ ಅವರನ್ನು ಭೇಟಿ ಮಾಡಿಸಿ ಎಂದ್ರೂ ಅದಕ್ಕೆ ಅವಕಾಶ ಮಾಡಿಲ್ಲ ಎನ್ನೋ ಹೋರಾಟಗಾರರ ಆರೋಪ ಮತ್ತು ಪ್ರಚಾರ.
4.2007 ಮತ್ತು 2009 ರಲ್ಲಿ ನರಗುಂದ ಕ್ಷೇತ್ರದ ಹಲವೆಡೆ ಉಂಟಾದ ಪ್ರವಾಹ ಪೀಡಿತರಿಗೆ ನೀಡಿದ ಆಸರೆ ಮನೆಯ ಹಂಚಿಕೆ ಮಾಡದಿರುವುದು.
5. ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಿರೋ ಶುದ್ಧ ಕುಡಿಯೋ ನೀರಿನ ಘಟಕಗಳ ನಿರ್ವಹಣೆ ಮಾಡುವಂತೆ ಸೂಚನೆ ನೀಡಿಲ್ಲದಿರೋದು, ವಿಶೇಷವಾಗಿ ಗ್ರಾಮಗಳ ಒಳಗೆ ಸಿಸಿ ರಸ್ತೆಯ ನಿರ್ಮಾಣದಲ್ಲಿ ನಿರ್ಲಕ್ಷ್ಯ ಮತ್ತು ಅಧಿಕಾರಿಗಳು ಅವ್ಯವಹಾರ ನಡೆಸಿದ್ರೂ ಅವರ ವಿರುದ್ಧ ಕ್ರಮಕ್ಕೆ ಮುಂದಾಗದ ಆರೋಪ.

ಬಿಜೆಪಿ ಪಕ್ಷದ ಗೆಲುವಿಗೆ ಪೂರಕವಾಗಬಹುದಾದ ಅಂಶಗಳು

1.ಆರ್‍ಎಸ್‍ಎಸ್‍ನ ನೇರ ಪ್ರವೇಶವಾದ್ರೆ ಸಂಘನಿಷ್ಟೆಯ ಕೆಲಸ.
2.ಅಧಿಕಾರ ಇಲ್ಲವಾದ್ರೂ, ಜನರ ಸಂಪರ್ಕದಲ್ಲಿರುವುದು.
3.ಸಿ ಸಿ ಪಾಟೀಲರಿಗೆ, ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕರ್ತರ ಕೆಲಸ
4.ಬಿ ಆರ್ ಯಾವಗಲ್ ಅವರು, ಕಾಮಗಾರಿ ಅನುಷ್ಟಾನದಲ್ಲಿ ತೋರುವ ನಿಷ್ಕಾಳಜಿ.
5.ಕ್ಷೇತ್ರವ್ಯಾಪ್ತಿಯಲ್ಲಿ ಕಡಿಮೆಯಾಗುತ್ತಿರೋ ಯಾವಗಲ್ ಅವರ ಜನಪ್ರಿಯತೆ.
6.ಮಹದಾಯಿ ವಿವಾದವನ್ನು ಕಾಂಗ್ರೆಸ್‍ನವರು ನಿಭಾಯಿಸಿದ ಪರಿ.

ಬಿಜೆಪಿ ಹಿನ್ನೆಡೆಗೆ ಪೂರಕವಾಗಬಹುದಾದ ಅಂಶಗಳು

1.ಮಹದಾಯಿ ವಿವಾದ ಪ್ರಧಾನಮಂತ್ರಿಯಿಂದ ಬಗೆಹರಿಯುತ್ತೆ ಅಂತ ಗೊತ್ತಿದ್ರೂ, ಅದರ ಅಸಮರ್ಪಕ ಬಳಕೆ.
2.ಬರಗಾಲ ಪೀಡಿತ ಪ್ರದೇಶವಾಗಿದ್ದು, ನೀರಿನ ಅವಶ್ಯಕತೆ ಇದೆ. ಹೀಗಾಗಿ ಈಗ ಕಾಂಗ್ರೆಸ್ ಪಕ್ಷದ ದಾಖಲೆಯ ಕೃಷಿ ಹೊಂಡ ನಿರ್ಮಾಣದ ಅಂಶ.
3.ಬಿಜೆಪಿ ಮಹದಾಯಿ ಹೋರಾಟವನ್ನು ಕೆಡಿಸೋ ಪ್ರಯತ್ನ ಮಾಡಲಾಗಿದೆ ಎನ್ನೋ ಹೋರಾಟಗಾರರ ಆರೋಪ ಮತ್ತು ಪ್ರಚಾರ.

ಇಷ್ಟೆಲ್ಲ ಪ್ಲಸ್ ಮತ್ತು ಮೈನಸ್ ಪಾಯಿಂಟ್ಸ್ ಹೊಂದಿರೋ ನರಗುಂದ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಯಾವ ಪಕ್ಷ ಗೆಲ್ಲುತ್ತೆ ಯಾರನ್ನು ಮತ್ತೆ ಶಾಸಕರಾಗಿ ಆಯ್ಕೆ ಮಾಡ್ಬೇಕು ಎನ್ನೋದು ಮಾತ್ರ ಮತದಾರ ಪ್ರಭುವಿನ ಕೈಯಲ್ಲಿದೆ.

Leave a Reply

Your email address will not be published.

Social Media Auto Publish Powered By : XYZScripts.com