ದೇಶದ ಬಹುತೇಕ ATM ಗಳು ಖಾಲಿ ಖಾಲಿ : ಮೂರು ದಿನದಲ್ಲಿ ಎಲ್ಲಾ ಸರಿಮಾಡ್ತೀವಿ ಎಂದ ಕೇಂದ್ರ

ದೆಹಲಿ : ದೇಶದ ಬಹುತೇಕ ರಾಜ್ಯಗಳ ಎಟಿಎಂಗಳು ಹಣವಿಲ್ಲದೆ ನೋ ಕ್ಯಾಶ್‌ ಬೋರ್ಡ್‌ ಹಾಕಿದ್ದು, ಹಣ ಸಿಗದೆ ಸಾರ್ವಜನಿಕರು ಪರದಾಡುವಂತಾಗಿದೆ. ಮಂಗಳವಾರ ಬೆಳಗ್ಗಿನಿಂದಲೇ ದೇಶದ ತೆಲಂಗಾಣ, ಹೈದರಾಬಾದ್‌, ವಾರಣಾಸಿ, ವಡೋದರಾ, ಭೇಪಾಲ್, ದೆಹಲಿ ಸೇರಿದಂತೆ ಅನೇಕ ನಗರಗಳ ಎಟಿಎಂ ಬರಿದಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಮುಂಜಾನೆಯಿಂದಲೇ ಹಣಕ್ಕಾಗಿ ಜನ ಸಾಲುಗಟ್ಟಿ ನಿಂತಿದ್ದು, ಅನೇಕ ಎಟಿಎಂಗಳ ಮುಂದೆ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ. ಇನ್ನು ಕೆಲ ಎಟಿಎಂಗಳು ತಾಂತ್ರಿಕ ಕಾರಣಗಳಿಂದಾಗಿ ಮುಚ್ಚಿರುವುದಾಗಿ ತಿಳಿದುಬಂದಿದೆ.

ಮತ್ತೊಂದೆಡೆ ಬ್ಯಾಂಕ್‌ಗಳು ಈ ಬಗ್ಗೆ ಹೇಳಿಕೆ ನೀಡಿದ್ದು, ಜನ ಹಣಕ್ಕಾಗಿ ಬಾರೀ ಬೇಡಿಕೆಯಿಡುತ್ತಿದ್ದಾರೆ. ಆದರೆ ಅದನ್ನು ನಿಭಾಯಿಸುವಷ್ಟು ಸೌಲಭ್ಯ ಬ್ಯಾಂಕ್‌ಗಳಲ್ಲಿ ಇಲ್ಲ ಎನ್ನಲಾಗಿದೆ. ಈ ಮಧ್ಯೆ ಕೇಂದ್ರ ಹಣಕಾಸು ಸಹಾಯಕ ಸಚಿವ ಎಸ್‌.ಪಿ ಶುಕ್ಲಾ ಪ್ರತಿಕ್ರಿಯಿಸಿದ್ದು. ನಮ್ಮ ಬಳಿ ಸದ್ಯಕ್ಕೆ 1,25,000ಕೋಟಿ ನಗದು ಇದೆ. ಕೆಲ ರಾಜ್ಯಗಳಲ್ಲಿ ಹಣ ಹೆಚ್ಚಿದ್ದು, ಇನ್ನು ಕೆಲ ರಾಜ್ಯಗಳಲ್ಲಿ ಹಣದ ಅಭಾವ ಉಂಟಾಗಿದೆ. ಆದ್ದರಿಂದ ಸದ್ಯದಲ್ಲೇ ಈ ಅಸಮತೋಲನವನ್ನು ನಿವಾರಣೆ ಮಾಡುತ್ತೇವೆ. ಈಗಾಗಲೆ ನಗದು ಇಲ್ಲದ ರಾಜ್ಯಗಳಿಗೆ ಹಣ ಪೂರೈಕೆ ಮಾಡುವ ಕೆಲಸ ನಡೆಯುತ್ತಿದೆ. ಇನ್ನು ಮೂರು ದಿನಗಳ ಒಳಗೆ ಎಲ್ಲಾ ಎಟಿಎಂಗಳಲ್ಲೂ ಹಣ ಸಿಗುವಂತೆ ಮಾಡುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com