ಎಚ್‌.ಡಿ ಕುಮಾರಸ್ವಾಮಿಯವರಿಗೆ ಸೆಡ್ಡು ಹೊಡೆದಿದ್ದ ಸಂದೇಶಸ್ವಾಮಿಗೆ BJPಯಿಂದ ಟಿಕೆಟ್‌

ಮೈಸೂರು : ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿಯವರಿಗೆ ಸೆಡ್ಡು ಹೊಡೆದು ಬಿಜೆಪಿ ಸೇರ್ಪಡೆಯಾಗಿದ್ದ ಸಂದೇಶಸ್ವಾಮಿ ನರಸಂಹರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜೆಡಿಎಸ್‌ನಲ್ಲಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಸಂದೇಶಸ್ವಾಮಿ ಬಿಜೆಪಿ ಸೇರ್ಪಡೆಗೊಂಡಿದ್ದರು. ವಲಸೆ ಬಂದ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಈ ಕುರಿತು ಮಾತನಾಡಿರುವ ಸಂದೇಶಸ್ವಾಮಿ, ಬಿಜೆಪಿ ಟಿಕೆಟ್‌ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಇನ್ನೇನಿದ್ದರೂ ಗೆಲ್ಲಬೇಕು ಅಷ್ಟೇ. ಜೆಡಿಎಸ್‌ ಟಿಕೆಟ್ ಸಿಗದೆ ನಿರಾಸೆಯಾಗಿತ್ತು. ಆದರೆ ಬಿಜೆಪಿ ನನಗೆ ಟಿಕೆಟ್ ನೀಡಿದೆ. ಎಲ್ಲರಲ್ಲೂ ವಿಶ್ವಾಸಕ್ಕೆ ತಂದುಕೊಂಡು ಚುನಾವಣೆ ಗೆಲ್ಲುವುದಾಗಿ ಹೇಳಿದ್ದಾರೆ.

ನಟ ದರ್ಶನ್‌ ಅವರಿಗೆ ನಮ್ಮ ಕುಟುಂಬದ ಬಗ್ಗೆ ಅಭಿಮಾನವಿದೆ. ಅವರನ್ನು ನಮ್ಮ ಪರ ಕ್ಯಾಂಪೇನ್ ಮಾಡಲು ಮನವಿ ಮಾಡುತ್ತೇನೆ ಎಂದಿದ್ದಾರೆ.

3 thoughts on “ಎಚ್‌.ಡಿ ಕುಮಾರಸ್ವಾಮಿಯವರಿಗೆ ಸೆಡ್ಡು ಹೊಡೆದಿದ್ದ ಸಂದೇಶಸ್ವಾಮಿಗೆ BJPಯಿಂದ ಟಿಕೆಟ್‌

Leave a Reply

Your email address will not be published.