ಕಮಲ ಪಕ್ಷ ಹಾಗೂ ಯಡಿಯೂರಪ್ಪ ಸರ್ವನಾಶವಾಗ್ತಾರೆ, ಇದು ಸತ್ಯ : BJP ನಾಯಕ

ಬೀದರ್ : ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತ ಪ್ರಕಾಶ್ ಖಂಡ್ರೆ ಯಡಿಯೂರಪ್ಪ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ,. 20 ವರ್ಷದಿಂದ ಭಾಲ್ಕಿಯಲ್ಲಿ ಬಿಜೆಪಿ ಪಕ್ಷವನ್ನ ಕಟ್ಟಿ ಬೆಳೆಸಿದ್ದೇವೆ. ಪಕ್ಷದ ಕಾರ್ಯಕ್ರಮಗಳಿಗಾಗಿ ಸಾಕಷ್ಟು ದುಡಿದಿದ್ದವರಿಗೆ ಬಿಎಸ್‌ವೈ ಅನ್ಯಾಯ ಮಾಡಿದ್ದಾರೆ. ಇದರಿಂದ ಬಿಜೆಪಿ ಸರ್ವನಾಶ ಮಾಡಲು ವಚನ ಭ್ರಷ್ಟ ಯಡಿಯೂರಪ್ಪ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪನವರಿಗೆ ನಾವು ತಕ್ಕ ಪಾಠ ಕಲಿಸುತ್ತೇವೆ. ಭೀಮಣ್ಣ ಖಂಡ್ರೆ-ಬಿಎಸ್‌ವೈ ಒಂದೇ ನಾಣ್ಯದ ಮುಖಗಳು ಇವರಿಬ್ಬರೂ ಸೇರಿಕೊಂಡು ನನ್ನನ್ನು ತುಳಿಯಲು ಮುಂದಾಗಿದ್ದಾರೆ. ಈ ಹಿಂದೆ ಕೂಡ ನನಗೆ ಮಂತ್ರಿ ಸ್ಥಾನ ತಪ್ಪಿಸಿದ್ದರು. ಈ ಪಾಪ ಇವರಿಗೆ ತಟ್ಟದೇ ಇರಲ್ಲ. ಬಿಜೆಪಿ ಮತ್ತು ಯಡಿಯೂರಪ್ಪ ಸರ್ವನಾಶ ವಾಗಿ ಹೋಗುತ್ತಾರೆ ಎಂದು ಬಿಜೆಪಿ ಟಿಕೆಟ್ ವಂಚಿತ ಪ್ರಕಾಶ್ ಖಂಡ್ರೆ ಬಿಎಸ್‌ವೈ ವಿರುದ್ಧ ಕಿಡಿಕಾರಿದ್ದಾರೆ,.

Leave a Reply

Your email address will not be published.

Social Media Auto Publish Powered By : XYZScripts.com