ಇಂಗ್ಲೀಷ್‌ ಗೊತ್ತಿಲ್ಲದಿದ್ದರೆ ಚುನಾವಣೆಗೆ ಸ್ಪರ್ಧಿಸಲು ಆಗಲ್ವಂತೆ…….ಕಾರಣವೇನು ?

ಬೆಂಗಳೂರು : ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಇಂಗ್ಲಿಷ್ ಭಾಷೆ ಗೊತ್ತಿರಬೇಕು.  ಹೌದು ಇಂಗ್ಲಿಷ್ ಭಾಷೆ ಗೊತ್ತಿಲ್ಲ ಎಂದರೆ ಚುನಾವಣಾ ಪ್ರಚಾರದ ಅನುಮತಿ ಫಾರ್ಮೆಟ್ ಗಳು ಭರ್ತಿ ಮಾಡಲು ಅಸಾಧ್ಯ. ಕಾರಣ ಎಲ್ಲಾ ಅನುಮತಿ ಅರ್ಜಿಗಳು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯವಿದ್ದು, ಕನ್ನಡ ನಾಡಲ್ಲಿ ಕನ್ನಡ ಭಾಷೆಯ ಯಾವುದೇ ಅರ್ಜಿ ಫಾರಂಗಳನ್ನು ಚುನಾವಣಾ ಆಯೋಗ ನೀಡಿಲ್ಲ. ಇಂಗ್ಲಿಷ್ ಭಾಷೆಯ ಓದು ಬರಹ ಬಾರದ ಅಭ್ಯರ್ಥಿಗಳು ಈ‌ ಅರ್ಜಿ ಫಾರಂಗಳನ್ನು ಭರ್ತಿ ಮಾಡಲು ಇಂಗ್ಲಿಷ್ ಗೊತ್ತಿದ್ದವರ ಮೊರೆ ಹೋಗಬೇಕಾಗಿದೆ. ಕನ್ನಡ ಭಾಷೆಯ ಅವಗಣನೆ ಮಾಡಿದ ಚುನಾವಣಾ ಆಯೋಗದ ಈ ನಡೆ ಕೆಲವರ ವಿರೋಧಕ್ಕೆ ಕಾರಣವಾಗಿದೆ.

One thought on “ಇಂಗ್ಲೀಷ್‌ ಗೊತ್ತಿಲ್ಲದಿದ್ದರೆ ಚುನಾವಣೆಗೆ ಸ್ಪರ್ಧಿಸಲು ಆಗಲ್ವಂತೆ…….ಕಾರಣವೇನು ?

Leave a Reply

Your email address will not be published.