ಕಮಲಕ್ಕೆ ಕೈ ಕೊಟ್ಟು, ಮಾವ, ಪತಿಯ ಜೊತೆ ತೆನೆ ಹೊತ್ತ ನಟಿ ಅಮೂಲ್ಯ….

ಬೆಂಗಳೂರು : ನಟಿ ಅಮೂಲ್ಯ ಈಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಮೂಲ್ಯ ಅವರ ಮಾವ ರಾಮಚಂದ್ರ ಬಿಜೆಪಿ ಪಕ್ಷ  ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅಮೂಲ್ಯ ಸಹ ಅಖಾಡಕ್ಕಿಳಿದಿದ್ದಾರೆ.

ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಅಮೂಲ್ಯ ಅವರ ಮಾವ ರಾಮಚಂದ್ರ ಅಧಿಕೃತವಾಗಿ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಧ್ವಜ ನೀಡುವ ಮೂಲಕ ರಾಮಚಂದ್ರ ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಿಕೊಂಡಿದ್ದಾರೆ. ಈ ವೇಳೆ ಅಮೂಲ್ಯ-ಜಗದೀಶ್ ದಂಪತಿ ಸಹ ಪಕ್ಷದ ಶಾಲು ಹೊದ್ದು ಜೆಡಿಎಸ್‌ಗೆ ಜೈ ಎಂದಿದ್ದಾರೆ.

ಅಮೂಲ್ಯ ಮಾವ ರಾಮಚಂದ್ರ ಬಿಜೆಪಿಯಿಂದ ಈ ಬರಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದರು. ಆದರೆ ಬಿಜೆಪಿಯಿಂದ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷ ಬದಲಾಯಿಸಿದ್ದಾರೆ. ಅಲ್ಲದೆ ಜೆಡಿಎಸ್‌ ಮೂಲಕ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ.

ರಾಮಚಂದ್ರ ಅವರ ಜೊತೆಗೆ ಕಾಂಗ್ರೆಸ್ ಟಿಕೆಟ್ ವಂಚಿತರಾದ ಹೇಮಚಂದ್ರ ಸಾಗರ್ ಮತ್ತು ಸಿ ವಿ ರಾಮನ್ ನಗರ ಟಿಕೆಟ್ ಆಕಾಂಕ್ಷಿ ರಮೇಶ್ ಸಹ ಜೆ ಡಿ ಎಸ್ ಪಕ್ಷವನ್ನು ಸೇರಿದ್ದಾರೆ. ಇನ್ನು ಚುನಾವಣೆಯ ದಿನ ಹತ್ತಿರ ಆಗುತ್ತಿದ್ದಂತೆ ಟಿಕೆಟ್ ಸಿಗದ ಮುಖಂಡರು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com