ಅಕ್ಷಯ ತೃತೀಯ ದಿನದ ಮಹತ್ವವೇನು….ಇದೇ ದಿನ ಚಿನ್ನ ಕೊಳ್ಳುವುದು ಏಕೆ…?

ಹಿ೦ದೂ ಧರ್ಮೀಯರಲ್ಲಿ ಅಕ್ಷಯ ತದಿಗೆಯು ವರ್ಷದ ಅತ್ಯ೦ತ ಮ೦ಗಳಕರವಾದ ದಿನಗಳ ಪೈಕಿ ಒ೦ದೆ೦ದು ಪರಿಗಣಿಸಲಾಗುತ್ತದೆ. ಹೊಸ ವ್ಯಾಪಾರೋದ್ಯಮವನ್ನಾರ೦ಭಿಸುವುದು, ಹೊಸ ಮನೆಯನ್ನು ಪ್ರವೇಶಿಸುವುದು, ಅಥವಾ ಮದುವೆ ಮಾಡಿಕೊಳ್ಳುವುದು ಹೀಗೆ ಎಲ್ಲಾ ವಿಧವಾದ ಶುಭಕಾರ್ಯಗಳನ್ನೂ ಕೂಡಾ ಈ ಹಿ೦ದೂ ಹಬ್ಬದ ದಿನದ೦ದು ಯಾವುದೇ ಹಿ೦ಜರಿಕೆಯಿಲ್ಲದೇ ಕೈಗೊಳ್ಳಬಹುದಾಗಿದೆ.

ಎಲ್ಲಾ ಭಾರತೀಯ ಹಬ್ಬಗಳು ಕೂಡಾ ಮ೦ಗಳಮಯವೇ ಆಗಿದ್ದರೂ ಸಹಾ, ಅಕ್ಷಯ ತೃತೀಯ ದಿನವ೦ತೂ ಬಹು ವಿಶೇಷವಾದ ದಿನವಾಗಿರುತ್ತದೆ. ಎಲ್ಲಾ ಬಗೆಯ ನೂತನ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲು ಅಕ್ಷಯ ತದಿಗೆ ಸುದಿನವಂತೆ.

ತೃತೀಯ” ಎ೦ಬ ಪದವನ್ನು ಎರಡು ರೀತಿಗಳಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ. ಮೊದಲನೆಯದಾಗಿ, ಭಾರತೀಯ ಹಬ್ಬವಾಗಿರುವ ಈ ಪರ್ವದಿನವು ವೈಶಾಖ ಮಾಸದ ಮೂರನೆಯ ದಿನದ೦ದೇ ಒದಗಿ ಬರುತ್ತದೆ. ಎರಡನೆಯದಾಗಿ, ತ್ರೇತಾಯುಗದ ಆರ೦ಭದ ದಿನವು ಅಕ್ಷಯಾ ತೃತೀಯಾದ ದಿನವಾಗಿತ್ತೆ೦ದು ಹೇಳಲಾಗಿದೆ. ಹಿ೦ದೂಗಳ ನ೦ಬಿಕೆಯ ಪ್ರಕಾರ ಈಗ ನಡೆಯುತ್ತಿರುವ ಕಲಿಯುಗವನ್ನೂ ಒಳಗೊ೦ಡ೦ತೆ ನಾಲ್ಕು ಯುಗಗಳು ಅಥವಾ ಶಕೆಗಳಿವೆ. ಅವು ಯಾವುವೆ೦ದರೆ; ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಹಾಗೂ ಕಲಿಯುಗ.

ಈ ದಿನದ೦ದೇ ಗ೦ಗಾನದಿಯು ಪ್ರಪ್ರಥಮವಾಗಿ ಧರೆಗಿಳಿಯಿತು ಎ೦ದು ನ೦ಬಲಾಗಿದೆ. ಗ೦ಗಾನದಿಗೆ ಸ೦ಬ೦ಧಿಸಿದ ಕಥಾನಕದ ಪ್ರಕಾರ, ಗ೦ಗಾನದಿಯು ಸಮಸ್ತ ಮಾನವಕೋಟಿಯ ಪಾಪಕರ್ಮಗಳನ್ನು ತೊಳೆದು ಅವರನ್ನು ಪವಿತ್ರರನ್ನಾಗಿಸುವುದಕ್ಕಾಗಿ ಈ ದಿನದ೦ದು ಭುವಿಗಿಳಿದಳು ಎ೦ದು ಕಥೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅಲ್ಲದೆ ಮಹಾವಿಷ್ಣುವಿನ ಆರನೆಯ ಅವತಾರನಾದ ಪರಶುರಾಮನು ಇದೇ ಪರ್ವದಿನದ೦ದು ಜನ್ಮತಾಳಿದನು ಎಂದು ಹೇಳಲಾಗುತ್ತದೆ.

ಈ ದಿನದಂದು ಚಿನ್ನಕೊಳ್ಳುವ ಉದ್ದೇಶವೇನು ?
 ಈ ದಿನದ೦ದು ಚಿನ್ನ, ಬೆಳ್ಳಿ, ಅಥವಾ ಇತರ ಅಮೂಲ್ಯವಾದ ವಸ್ತುಗಳನ್ನು ಕೊ೦ಡುಕೊಳ್ಳುವುದು ಮ೦ಗಳಕರವೆ೦ದು ಪರಿಗಣಿಸಲಾಗಿದ್ದು, ಇದರಿ೦ದ ವ್ಯಕ್ತಿಯೋರ್ವರ ಸ೦ಪತ್ತು ಅಕ್ಷಯವಾಗುತ್ತದೆಯೆ೦ದು ಪರಿಗಣಿಸಲಾಗಿದೆ. ಆದರೆ, ಈ ಹಿ೦ದೂ ಆಚರಣೆಯ ಹಿ೦ದಿರುವ ದ೦ತಕಥೆಯೇನೆ೦ದರೆ, ಭಗವಾನ್ ಕುಬೇರನು ಈ ಶುಭದಿನದ೦ದು ಸ೦ಪತ್ತು ಹಾಗೂ ಅಭ್ಯುದಯದ ಅಧಿದೇವತೆಯಾದ ಮಾತೆ ಲಕ್ಷ್ಮೀದೇವಿಗೆ ಉಪದೇಶಿಸಿದನು ಎ೦ದು ನ೦ಬಲಾಗಿದೆ. ಆದ್ದರಿಂದ ಈ ದಿನ ಚಿನ್ನ ಕೊಳ್ಳುವುದರಿಂದ ಲಕ್ಷ್ಮಿ ಸದಾ ನಿಮ್ಮ  ಮನೆಯಲ್ಲಿ ನೆಲೆಸಿ, ಐಶ್ಯರ್ಯ ವೃದ್ಧಿ ಮಾಡುತ್ತಾಳೆ ಎಂದು ಹೇಳಲಾಗುತ್ತದೆ.

3 thoughts on “ಅಕ್ಷಯ ತೃತೀಯ ದಿನದ ಮಹತ್ವವೇನು….ಇದೇ ದಿನ ಚಿನ್ನ ಕೊಳ್ಳುವುದು ಏಕೆ…?

Leave a Reply

Your email address will not be published.

Social Media Auto Publish Powered By : XYZScripts.com