Hyderabad : ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ : ಅಸೀಮಾನಂದ ಸಹಿತ ಎಲ್ಲ ಆರೋಪಿಗಳ ಖುಲಾಸೆ

ಹೈದರಾಬಾದ್ ನಲ್ಲಿ ಮೆಕ್ಕಾ ಮಸೀದಿ ಸ್ಫೋಟಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಆರೋಪಿಗಳ ಕೃತ್ಯವನ್ನು ಸಾಬೀತು ಪಡಿಸಲು ಎನ್ ಐಎ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.

ಪ್ರಕರಣದ ಪ್ರಮುಖ ಆರೋಪಿ ಅಸೀಮಾನಂದ ಸೇರಿದಂತೆ ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ, ಭರತ್ ಭಾಯಿ, ರಾಜೇಂದ್ರ ಚೌಧರಿ ಇವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಇನ್ನಿಬ್ಬರು ಆರೋಪಿಗಳಾದ ಸಂದೀಪ್ ಡಾಂಗೆ, ರಾಮಚಂದ್ರ ಕಾಲ್ಸಂಗ್ರೆ ಕಾಣೆಯಾಗಿದ್ದು, ಸುನೀಲ್ ಜೋಶಿ ಮೃತಪಟ್ಟಿದ್ದಾನೆ.

2007 ರ ಮೇ 18ರಂದು ಹೈದರಾಬಾದಿನ ಮೆಕ್ಕಾ ಮಸೀದಿ ಬಳಿ ಶುಕ್ರವಾರದ ನಮಾಜ್ ನಡೆಯುತ್ತಿದ್ದ ವೇಳೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 9 ಮಂದಿ ಸಾವಿಗೀಡಾಗಿ, 58 ಜನ ಗಾಯಗೊಂಡಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com