ಬಿಸಿಲಲ್ಲೇ ಎಮ್ಮೆ ಮೇಯಿಸುತ್ತಾ ಬೆಳೆದು ಬಂದವರು ನಾವು, ಈ ಬಿಸಿಲೆಲ್ಲ ನಮಗೆ ಲೆಕ್ಕಕ್ಕಿಲ್ಲ : CM

ಮೈಸೂರು : ಜೆಡಿಎಸ್‌ಗೆ ಓವೈಸಿ ಬೆಂಬಲ ವಿಚಾರ ಕುರಿತಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ರಾಜ್ಯ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಕೂಡ ಇದರಿಂದ ಏನೂ ತೊಂದರೆಯಾಗುವುದಿಲ್ಲ. ಓವೈಸಿಗೆ ರಾಜ್ಯದಲ್ಲಿ ಸ್ಥಾನಗಳು ಎಲ್ಲಿವೆ, ಅವರು ಎಲ್ಲಿ ಗೆದ್ದಿದ್ದಾರೆ ಎಂಬುದು ತಿಳಿಯಲಿ ಎಂದಿದ್ದಾರೆ.

ಓವೈಸಿ ಕೋಮುಗಲಭೆಗೆ ಅವಕಾಶ ಕೊಟ್ಟಿಲ್ಲ ಎಂಬ ಹೆಚ್ ಡಿಕೆ ಹೇಳಿಕೆ ವಿಚಾರ ಸಂಬಂಧ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರಲ್ಲ ಹಾಗೇ ಅವರು ಸಹಾಯ ತಗೋಳ್ತಿದ್ದಾರಲ್ಲಾ ಅದಕ್ಕೆ ಹಾಗೆ ಹೇಳುತ್ತಿರುವುದಾಗಿ ಚಾಟಿ ಬೀಸಿದ್ದಾರೆ.

 

ಬಿರು ಬಿಸಿಲಿನಲ್ಲೂ ಸಿದ್ದರಾಮಯ್ಯ ಪ್ರಚಾರ ಮಾಡುತ್ತಿರುವುದರ ಕುರಿತು ಮಾತನಾಡಿದ ಅವರು, ನಾವು ಬಿಸಿಲಿನಲ್ಲಿ ಎಮ್ಮೆ ಮೇಯಿಸಿಕೊಂಡು ಬೆಳೆದು ಬಂದವರು ಈ ಬಿಸಿಲು ನನಗೆ ಲೆಕ್ಕಕ್ಕಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com