ಬೃಂದಾವನಕ್ಕೆ ಹಾಲಿವುಡ್ ನಟಿ ಭೇಟಿ : ಬಡ ಮಗುವನ್ನು ದತ್ತು ಪಡೆದ ಮೇರಿ ಎಗೊರೊಪೊಲಾಸ್

ವಿಭಿನ್ನ ಹಾಗೂ ಅನೇಕ ಅಪರೂಪದ ಸಂಸ್ಕೃತಿಗಳ ಸಂಗಮದಂತಿರುವ ಭಾರತ ವಿದೇಶಿ ಯಾತ್ರಿಕರನ್ನು ತನ್ನತ್ತ ಸೆಳೆಯುತ್ತದೆ. ಪ್ರತೀ ವರ್ಷ ಕೋಟ್ಯಂತರ ಜನ ವಿದೇಶದಿಂದ ಭಾರತ ಪ್ರವಾಸವನ್ನು ಕೈಗೊಳ್ಳುತ್ತಾರೆ. ಹಾಲಿವುಡ್ ನಟ, ನಟಿಯರೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ.

ಖ್ಯಾತ ಹಾಲಿವುಡ್ ನಟಿ ಮೇರಿ ಎಗರೊಪೊಲಾಸ್ ಭಾರತ ಪ್ರವಾಸ ಕೈಗೊಂಡಿದ್ದಾರೆ. ಶ್ರೀಕೃಷ್ಣನ ಪರಮಭಕ್ತೆಯಾಗಿರುವ ಮೇರಿ ಕೃಷ್ಣನ ಜನ್ಮಸ್ಥಳವಾದ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬೃಂದಾವನಕ್ಕೆ ಬಂದು ನೆಲೆಸಿದ್ದಾರೆ.

Marie Avgeropoulos

ಮೇರಿ ಎಗೊರೊಪೊಲಾಸ್ ಭಾರತ ಯಾತ್ರೆಯ ಹಿಂದೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದ್ದು, ಕೃಷ್ಣನನ್ನು ಮತ್ತಷ್ಟು ಹತ್ತಿರದಿಂದ ತಿಳಿಯುವ ಉದ್ದೇಶ ಹೊಂದಿದ್ದಾರೆ. ಎರಡನೆಯದ್ದು ಭಾರತದಲ್ಲಿ ಸಾಮಾಜಿಕ ಸೇವೆ ಮಾಡುವ ಆಕಾಂಕ್ಷೆಯುಳ್ಳವರಾಗಿದ್ದಾರೆ.

Image result for Marie avgeropoulos adopt baby india

Image result for Marie avgeropoulos adopt baby india

ಸಮೀಪದ ಶಾಲೆಯೊಂದಕ್ಕೆ ಭೇಟಿ ನೀಡಿದ ಮೇರಿ ಮಕ್ಕಳೊಂದೊಗೆ ಸಮಯ ಕಳೆದಿದ್ದಾರೆ. ಅಲ್ಲದೇ ಮೇರಿ ಅದೇ ಶಾಲೆಯ ಬಡ ಮಗುವೊಂದನ್ನು ದತ್ತು ಪಡೆದುಕೊಂಡಿದ್ದಾರೆ. ಆ ಮಗುವಿನ ಭವಿಷ್ಯದ ಶಿಕ್ಷಣದ ಸಂಪೂರ್ಣ ಖರ್ಚನ್ನು ಭರಿಸಲು ನಿರ್ಧರಿಸಿದ್ದಾರೆ. ‘ ಫುಡ್ ಫಾರ್ ಲೈಫ್ ‘ ಎಂಬ ಸೇವಾ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ.

Image result for Marie avgeropoulos school children india

One thought on “ಬೃಂದಾವನಕ್ಕೆ ಹಾಲಿವುಡ್ ನಟಿ ಭೇಟಿ : ಬಡ ಮಗುವನ್ನು ದತ್ತು ಪಡೆದ ಮೇರಿ ಎಗೊರೊಪೊಲಾಸ್

Leave a Reply

Your email address will not be published.