ಹೆಂಡತಿ ಮೇಲೆ ದೌರ್ಜನ್ಯ ಮಾಡಿದ ಮೋದಿಗೆ ಹೆಣ್ಮಕ್ಕಳ ಬಗ್ಗೆ ಏನು ಗೊತ್ತು ? : ಪ್ರತಿಭಾ ಕುಳಾಯಿ

ಮಂಗಳೂರು : ನನಗೆ ಭಾರತದಲ್ಲಿ ಇರಲು ನಾಚಿಕೆ ಆಗುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ, ಪಾಲಿಕೆ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಹೇಳಿಕೆ ನೀಡಿದ್ದಾರೆ.

ನನಗೆ ಭಾರತದಲ್ಲಿ ಇರಲು ನಾಚಿಕೆಯಾಗುತ್ತಿದೆ. ಆದರೆ ನಾನು ಹೀಗೆ ಹೇಳಿದರೆ ನಾಳೆ ನನ್ನ ಮನೆಗೆ ಕಲ್ಲು ತೂರ್ತಾರೆ. ಇಲ್ಲಿನ ಸೋ ಕಾಲ್ಡ್ ಹಿಂದೂಗಳು, ಬಿಜೆಪಿ ಹಿಂದೂಗಳು ಕಲ್ಲು ಹೊಡೀತಾರೆ. ಹಿಂದುತ್ವದ ಬಗ್ಗೆ ಮಾತನಾಡೋರು ಎಷ್ಟು ಮಂದಿ ಹೆಣ್ಮಕ್ಕಳಿಗೆ ಮರ್ಯಾದೆ ಕೊಡ್ತಾರೆ? ಎಂದು ಪ್ರಶ್ನಿಸಿದ್ದಾರೆ. ನೀವು ಯಾರಿಗೆ ಬೇಕಾದ್ರೂ ಓಟ್ ಕೊಡಿ ಆದ್ರೆ ಹೆಣ್ಣನ್ನ ರಕ್ಷಿಸೋ ಪಾರ್ಟಿಗೆ ಕೊಡಿ ಎಂದಿರುವ ಪ್ರತಿಭಾ ಕುಳಾಯಿ, ಮೋದಿಗೆ ಹೆಂಗಸರ ಬಗ್ಗೆ ಗೊತ್ತಿಲ್ಲ, ಹೆಂಡತಿ ಬಿಟ್ಟು ಪತ್ನಿಗೆ ದೌರ್ಜನ್ಯ ಮಾಡಿದವರು ಅವರು. ಕಳೆದ ಬಾರಿ ಲೋಕಸಭೆ ಚುನಾವಣೆ ರಿಸಲ್ಟ್ ಬಂದಾಗ ನನ್ನ ಮನೆಗೆ ಬಂದು‌ ಕಿರುಕುಳ ಕೊಟ್ಟಿದ್ರು. ಇಲ್ಲಿನ ಸೋ ಕಾಲ್ಡ್ ಹಿಂದೂಗಳು, ಬಿಜೆಪಿ ಹಿಂದೂಗಳು ಕಿರುಕುಳ ಕೊಟ್ಟಿದ್ದರು. ಕೋಡಿಕೆರೆ ಎಂಬ ಊರಲ್ಲಿ ಕಾಂಗ್ರೆಸ್‌ ಪ್ರಚಾರಕ್ಕೆ ಬರಬಾರದು ಅಂತ ಹೀಗೆಲ್ಲಾ ಮಾಡಿದ್ದರು. ನನ್ನ ಗಾಡಿಗೆ ಮೂತ್ರ ಮಾಡಿ ಅಸಭ್ಯವಾಗಿ ವರ್ತಿಸಿದ್ದರು ಎಂದಿದ್ದಾರೆ.

Leave a Reply

Your email address will not be published.