ಸೊಂಟದ ಸುತ್ತಲಿನ ಬೊಜ್ಜು ಕರಗಿಸಲು ಸುಲಭವಾದ ಟಿಪ್ಸ್‌ ಇಲ್ಲಿದೆ….

ನಮ್ಮ ಸುತ್ತ ಮುತ್ತಲಿರುವ ಜನರಲ್ಲಿ ಹಲವರು ತಮ್ಮ ಸೊಂಟದ ಕೊಬ್ಬು ಇತರರಿಗೆ ಸುಲಭವಾಗಿ ಕಾಣಬಾರದು ಎಂದು ಸಡಿಲ ಬಟ್ಟೆಗಳನ್ನು ಧರಿಸುವುದು, ಬೆನ್ನು ನೋವಾಗುವಷ್ಟು ನೆಟ್ಟಗೆ ಕುಳಿತುಕೊಳ್ಳುವುದು…ಒಟ್ಟಾರೆ ತಮ್ಮ ಸೊಂಟದ ಕೊಬ್ಬು ಇತರರಿಗೆ ಕಾಣದಿರುವಂತೆ ಎಲ್ಲಾ ಬಗೆಯ ಪ್ರಯತ್ನಗಳನ್ನು ನಡೆಸುತ್ತಾರೆ. ಏಕೆಂದರೆ ಈ ಕೊಬ್ಬು ಕರಗಿಸುವುದು ಅಷ್ಟು ಸುಲಭವಲ್ಲ, ಸೊಂಟದ ಕೊಬ್ಬು ಅನಾರೋಗ್ಯದ ಲಕ್ಷಣವಾಗಿದ್ದು ಕೊಬ್ಬು ಹೆಚ್ಚಿದಷ್ಟೂ ಅನಾರೋಗ್ಯವೂ ಹೆಚ್ಚು. ಸೊಂಟದ ಸುತ್ತಳತೆ ಹೆಚ್ಚಾದಷ್ಟೂ ಹಲವಾರು ಕಾಯಿಲೆಗಳು ಆವರಿಸುವ ಸಾಧ್ಯತೆಗಳೂ ಹೆಚ್ಚಿವೆ. ಅಲಕ್ಷಿಸಿದರೆ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ನಿದ್ದೆ ಸರಿಯಾಗಿ ಬರದಿರುವುದು, ಮಧುಮೇಹ, ಖಿನ್ನತೆ, ನಂಪುಂಸಕತ್ವ ಹಾಗೂ ಮರೆಗುಳಿತನ ಮೊದಲಾದ ಕಾಯಿಲೆಗಳು ಆವರಿಸುವ ಸಾಧ್ಯತೆ ದಟ್ಟವಾಗುತ್ತದೆ.
ನೀವು ಸಣ್ಣಗೆ ಆಗಲು ಅಥವಾ ತೂಕ ಕಡಿಮೆ ಮಾಡಿಕೊಳ್ಳಲು ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ ಮಾಡುವುದು, ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ನಿಮಗೆ ಫಲಿತಾಂಶವನ್ನು ನಿಧಾನವಾಗಿ ನೀಡುತ್ತದೆ. ಆದರೆ ನೀವು ಅದರಿಂದ ಪ್ರಯೋಜನವಾಗುತ್ತಿಲ್ಲ ಎಂದು ಅದನ್ನು ಅರ್ಧದಲ್ಲೇ ಬಿಡುವ ಸಾಧ್ಯತೆ ಇದೆ. ಚಿಂತಿಸಬೇಡಿ ಇಲ್ಲಿ ನೀಡಿರುವ ಸಲಹೆಗಳನ್ನು ನೀವು ಪಾಲಿಸಿದರೆ ಬೇಗನೆ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ದಾಸವಾಳ ಟೀ : 
ದಾಸವಾಳ ನಿಮ್ಮ ದೇಹದಲ್ಲಿ ಶೇಖರಣೆಯಾಗಿರುವ ಅಧಿಕ ನೀರನ್ನು ಕರಗಿಸುವ ಮೂಲಕ ನೀವು ಸಣ್ಣಗೆ ಆಗಲು ಸಹಾಯ ಮಾಡುತ್ತದೆ. ಇದರಲ್ಲಿರುವ ಡೈಯುರೆಟಿಕ್ ಗುಣ ಹೊಟ್ಟೆ ಉಬ್ಬದಂತೆ ಅಂದರೆ ದಪ್ಪವಾಗದಂತೆ ತಡೆಯುತ್ತದೆ. ಮುಖ್ಯವಾಗಿ ಇದು ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಸಣ್ಣ ತುಂಡುಗಳನ್ನಾಗಿಸಿ ದೇಹದ ಹೊರಗೆ ಹಾಕಲು ಸಹಾಯ ಮಾಡುತ್ತದೆ.

ಗ್ರೀನ್ ಟೀ
ಇದನ್ನು ತೂಕ ಕಡಿಮೆ ಮಾಡಲು ಇರುವ ಒಂದು ಅದ್ಬುತ ಚಹಾ ಎಂದು ವಿಶ್ವದಾದ್ಯಂತ ಪರಿಗಣಿಸಲಾಗಿದೆ. ಇದು antioxidants ಗಳಿಂದ ಸಮೃದ್ಧವಾಗಿದೆ, ಮತ್ತು ಇದು ತನ್ನ ಅದ್ಬುತ ಶಕ್ತಿಯಿಂದ ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಇದನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಕ್ಯಾನ್ಸರ್ ಮತ್ತು ಮಧುಮೇಹ ಬರದಂತೆ ತಡೆಯಬಹುದು, ಕೆಲವರು ಕುಡಿಯಲು ಚೆನ್ನಾಗಿರಲಿ ಎಂದು ಇದಕ್ಕೆ ಸಕ್ಕರೆ ಸೇರಿಸುವರು, ನಿಮಗೆ ಬೇಗನೆ ಫಲಿತಾಂಶ ಬೇಕಿದ್ದರೆ ಮತ್ತು ಇದರ ಲಾಭಗಳನ್ನು ಪಡೆಯಲು ಇದಕ್ಕೆ ಸಕ್ಕರೆಯನ್ನು ಸೇರಿಸಬೇಡಿ.

ಪುದೀನ ಎಲೆ
ಇದು ಸಿಹಿ ವಾಸನೆ ಮಿಶ್ರ ಉಳ್ಳ ರುಚಿ ನೀಡುವ ಗಿಡ. ಇದನ್ನು ಹಲವು ಅಡುಗೆಗಳಲ್ಲಿ ಬಳಸುವರು. ಇದು ದೇಹದಲ್ಲಿರುವ ವಿಷಯುಕ್ತ ಅಂಶಗಳನ್ನು ಹೊರಹಾಕಲು ಮತ್ತು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ಹೊಟ್ಟೆ ಉಬ್ಬುವುದನ್ನು ನಿಯಂತ್ರಿಸುತ್ತದೆ. ಇದನ್ನು ನೀವು ನೇರವಾಗಿ ಸಹ ಸೇವಿಸಬಹುದು. ಅಥವಾ ಚಹಾಗೆ ಇದನ್ನು ಸೇರಿಸಿ ಕುಡಿಯಬಹುದು. ಇದು ಜೀರ್ಣ ಕ್ರಿಯೆ ಉತ್ತಮವಾಗಿ ಆಗುವಂತೆ ಮಾಡುತ್ತದೆ.

ಕೊತ್ತಂಬರಿ ಸೊಪ್ಪು
ಇದನ್ನು ಸಾಮಾನ್ಯವಾಗಿ ಎಲ್ಲಾ ಅಡುಗೆಗಳಲ್ಲಿ ಅಲಂಕರಿಸಲು ಉಪಯೋಗಿಸುವರು, ಆದರೆ ಇದರ ಸೇವನೆಯಿಂದ ಹಲವು ಲಾಭಗಳಿವೆ. ಇದು ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಶುಗರ್ ಇರುವವರು ಇದನ್ನು ಸೇವಿಸಬಹುದು. ಜೊತೆಗೆ ಇದು ಹೊಟ್ಟೆ ಕರಗಿಸುವಲ್ಲಿ ನೆರವಾಗುವುದರ ಜೊತೆಗೆ ಕೂದಲ ಬೆಳವಣಿಗೆ ಉತ್ತಮವಾಗುವಂತೆ ಮಾಡುತ್ತದೆ.
ಇದು ಆಯುರ್ವೇದದಲ್ಲಿ ನಮ್ಮ ಪೂರ್ವಜರು ಪುರಾತನ ಕಾಲದಿಂದಲೂ ಉಪಯೋಗಿಸಿಕೊಂಡು ಬಂದಿರುವ ಗಿಡಮೂಲಿಕೆಯಾಗಿದೆ. ಆಯುರ್ವೇದದ ಪ್ರಕಾರ ಇದು ಹೊಟ್ಟೆಯ ಬೊಜ್ಜನ್ನು ಕರಗಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಬಣ್ಣಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com