ಧೋನಿ ಪತ್ನಿಗೆ ಮೈದಾನದಲ್ಲೇ ‘ I Love You ‘ ಎಂದ ಅಭಿಮಾನಿ..!

ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳ ನಡುವೆ ಐಪಿಎಲ್ ಟಿ20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಚೆನ್ನೈ ವಿರುದ್ಧ ರವಿಚಂದ್ರನ್ ಅಶ್ವಿನ್ ನಾಯಕತ್ವದ ಪಂಜಾಬ್ 4 ರನ್ ರೋಚಕ ಜಯ ಸಾಧಿಸಿತು.

ಪಂದ್ಯದ ವೇಳೆ ಮೈದಾನದಲ್ಲಿ ತಮಾಷೆಯ ಘಟನೆಯೊಂದು ನಡೆಯಿತು. ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತು ಮ್ಯಾಚ್ ವೀಕ್ಷಿಸುತ್ತಿದ್ದ ಅಭಿಮಾನಿಯೊಬ್ಬ ಧೋನಿ ಪತ್ನಿ ಸಾಕ್ಷಿ ಧೋನಿಗೆ ‘ ಐ ಲವ್ ಯೂ ‘ ಎಂದಿದ್ದಾನೆ.

ಅಭಿಮಾನಿಯೊಬ್ಬ ತನ್ನ ಕೈಯಲ್ಲಿ ಫಲಕವನ್ನು ಹಿಡಿದುಕೊಂಡು ಕ್ಯಾಮೆರಾ ಕಣ್ಣಿಗೆ ಸೆರೆಯಾಗುವಂತೆ ತೋರಿಸುತ್ತಿದ್ದ. ಅದರ ಮೇಲೆ ‘ ಸಾರಿ ಮಾಹಿ ಭಾಯಿ, ಐ ಲವ್ ಯೂ ಸಾಕ್ಷಿ ಧೋನಿ ‘ ಎಂದು ಬರೆಯಲಾಗಿತ್ತು.

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಧೋನಿ 44 ಎಸೆತಗಳಲ್ಲಿ 79 ರನ್ ಗಳಿಸಿದ್ದರು. ಈ ಆಕ್ರಮಣಕಾರಿ ಇನ್ನಿಂಗ್ಸ್ ನಲ್ಲಿ ಧೋನಿ 6 ಆಕರ್ಷಕ ಬೌಂಡರಿ ಹಾಗೂ 5 ಅಮೋಘ ಸಿಕ್ಸರ್ ಸಿಡಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com