ಶ್ರೀರಾಮುಲು ಗೆಲುವಿಗಾಗಿ ಜನಾರ್ಧನ ರೆಡ್ಡಿ ರಣತಂತ್ರ : ಶೀಘ್ರವೇ ಮೊಳಕಾಲ್ಮೂರಿಗೆ ಶಿಫ್ಟ್‌

ಚಿತ್ರದುರ್ಗ : ಮಾಜಿ ಸಚಿವ ಜನಾರ್ಧನ ರೆಡ್ಡಿ, ತಮ್ಮ ಸ್ನೇಹಿತ ಶ್ರೀರಾಮುಲು ಗೆಲುವಿಗೆ ರಣತಂತ್ರ ಹೆಣೆದಿದ್ದಾರೆ. ಕುಚುಕು ಗೆಳೆಯನ ಗೆಲುವು ನೋಡಲು ಕಾತುರವಾಗಿರುವ ರೆಡ್ಡಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಶಿಫ್ಟ್‌ ಆಗಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಹಾನಗಲ್‌ ಬಳಿ ತೋಟದ ಮನೆಯಲ್ಲಿ ಜನಾರ್ಧನರೆಡ್ಡಿ ವಾಸ್ತವ್ಯಕ್ಕಾಗಿ ಸಕಲ ಸಿದ್ದತೆ ಮಾಡಲಾಗುತ್ತಿದೆ. ನುಂಕಿ ಮಲೆ ಬೆಟ್ಟದ ರಸ್ತೆಯಲ್ಲಿರುವ ಎರಡು ಮಹಡಿಯ ತೋಟದ ಮನೆಗೆ ಸೋಮಶೇಖರ ರೆಡ್ಡಿ ಅವರಿಗೆ ಬಾಡಿಗೆ ಮನೆ ಪಡೆಯಲಾಗಿದ್ದು, ಕೇವಲ 101 ರೂಗೆ ಈ ಮನೆಗೆ ಬಾಡಿಗೆ ನೀಡಬೇಕಿದೆ. ಇನ್ನು ಮೂರ್ನಾಲ್ಕು ದಿನದಲ್ಲಿ ರೆಡ್ಡಿ ಈ ತೋಟದ ಮನೆಗೆ ಶಿಫ್ಟ್ ಆಗುವ ಸಾಧ್ಯತೆ ಇದೆ.

ರೆಡ್ಡಿ ರಾಜಕೀಯ ಎಂಟ್ರಿಯಿಂದಾಗಿ ರಾಜಕೀಯ ವಲಯದಲ್ಲಿ ಭಾರೀ ನಿರೀಕ್ಷೆ ಮೂಡಿದ್ದು, ಶ್ರೀರಾಮುಲು ಗೆಲುವು ಖಚಿತ ಎಂದು ಗುಸು ಗುಸು ಕೇಳಿಬರುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com