ನಿನ್ನ ರೇಟ್‌ ಎಷ್ಟು ಎಂದು ಕಮೆಂಟ್‌ ಮಾಡಿದವನಿಗೆ R.J ರ್ಯಾಪಿಡ್‌ ರಶ್ಮಿ ಮಾಡಿದ್ದೇನು ?

ಬೆಂಗಳೂರು : ಕೆಲ ದಿನಗಳ ಹಿಂದೆ ರಾಜರಥ ಸಿನಿಮಾದ ಕುರಿತು ಮಾತನಾಡಿ ಸುದ್ದಿಯಾಗಿದ್ದ ಆರ್‌. ಜೆ ರ್ಯಾಪಿಡ್‌ ರಶ್ಮಿ ಅವರಿಗೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಬೆದರಿಕೆ ಬರುತ್ತಿರುವುದಾಗಿ ರಶ್ಮಿ ದೂರು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ರಾಜರಥ ಸಿನಿಮಾ ತಂಡಕ್ಕೆ ರಾಜರಥ ಸಿನಿಮಾ ನೋಡದವರು ಏನು ಎಂಬ ಪ್ರಶ್ನೆ ಕೇಳಿದ್ದು, ಇದಕ್ಕೆ ಲೋಫರ್‌ ನನ್ನ ಮಕ್ಕಳು, ಕಚಡಾ ನನ್ನ ಮಕ್ಕಳು ಎಂದು ಸಿನಿಮಾ ತಂಡ ಹೇಳಿತ್ತು. ಅಲ್ಲದೆ ಇಂತಹ ಪ್ರಶ್ನೆ ಕೇಳಿದ್ದ ರಶ್ಮಿ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು.

ಇದಾದ ಬಳಿಕ ಫೇಸ್‌ಬುಕ್‌ನಲ್ಲಿ ಕೆಲವರು ನಿನ್ನ ರೇಟ್‌ ಎಷ್ಟು ಎಂದು ಹಾಗೂ ಇನ್ನತರೆ ಅಶ್ಲೀಲ ಶಬ್ದಗಳನ್ನು ಬಳಸಿ ಮೆಸೇಜ್ ಮಾಡುತ್ತಿರುವುದಲ್ಲದೆ, ತನ್ನ ಮೇಲೆ ಅತ್ಯಾಚಾರ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ರಶ್ಮಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ನನಗೆ ಬಂದಿರುವ ಪ್ರತಿಯೊಂದು ಮೆಸೇಜನ್ನೂ ಮಹಿಳಾ ಆಯೋಗಕ್ಕೆ ನೀಡಿದ್ದು, ಸೈಬರ್‌ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.