ನನ್ನ ರಾಜಕೀಯ ನಾನು ಮಾಡ್ತೀನಿ, ಕಾಂಗ್ರೆಸ್‌ ಟಿಕೆಟ್ ಬಗ್ಗೆ ನಾನ್ಯಾಕೆ ತಿಳಿದುಕೊಳ್ಳಲಿ : HDK

ಬೆಂಗಳೂರು : ಜೆಡಿಎಸ್‌ನಿಂದ ಹೊರಬಂದು ಕಾಂಗ್ರೆಸ್‌ ಸೇರಿದ್ದ ಶಾಸಕರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿರುವ ವಿಚಾರ ಸಂಬಂಧ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರು ನಮ್ಮ ಪಕ್ಷದಿಂದ ಹೊರ ನಡೆದು ಎರಡು ವರ್ಷವಾಗಿದೆ. ಎರಡು ವರ್ಷಗಳ ಹಿಂದೆಯೇ ಅವರು ಕಾಂಗ್ರಸ್‌ ಸೇರಿದ್ದಾರೆ. ಅವ್ರ ಜೊತೆಗೆ ಇನ್ನು ಏಳು ಜನ್ರಿಗೆ ಕಾಂಗ್ರೆಸ್ ಟಿಕೆಟ್ ಕೊಡಲಿ. ಅವ್ರ ಬಗೆಗಿನ ಚರ್ಚೆ ಅನವಶ್ಯಕ. ನನ್ನ ರಾಜಕೀಯ ನಾನು ಮಾಡುತ್ತೆನೆ.ಕಾಂಗ್ರೆಸ್ನಲ್ಲಿ ಯಾರಿಗೆ ಟಿಕೆಟ್ ಕೊಟ್ರು ಅನ್ನುವುದರ ಬಗ್ಗೆ ನಾನೇಕೆ ತಿಳಿದು ಕೊಳ್ಳಲಿ ಎಂದಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಇನ್ನೂ ಒಂದು ವಾರ ಇಲ್ಲೆ ಇದ್ದರೂ ನನಗೇನೂ ತೊಂದರೆಯಿಲ್ಲ. ನಾನು ನಿನ್ನೆ ಹೋದ ಹಳ್ಳಿಗಳಲ್ಲಿ ಸದ್ಯ ನಂಗೆ ವೋಟು ಹಾಕದಿದ್ರೂ ಪರ್ವಾಗಿಲ್ಲ, ಮುಖ್ಯಮಂತ್ರಿಗಳು ಬಂದಾಗ ಆ ಸಭೆಗೆ ಹಾಜರಾಗಿ ಅಂತಾ ನಮ್ಮ ಬೆಂಬಲಿಗರಿಗೆ ಯಾವ ಯಾವ ಆಮಿಷ ಒಡ್ಡಿದ್ದಾರೆ ಎಂದು ನನಗೆ ಗೊತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದ ಜನತೆ ಜಿ.ಟಿ.ದೇವೇಗೌಡರ ಪರವಾಗಿರುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಿದ್ದರಾಮಯ್ಯ ನನ್ನ ವಿರುದ್ಧ ಸ್ಪರ್ಧೆಗೆ ನಿಂತರೂ ನನಗೇನೂ ತೊಂದರೆಯಿಲ್ಲ ಎಂದಿದ್ದಾರೆ.

 

ಟಿಕೆಟ್ ಹಂಚಿಕೆ ನಂತರ ಕಾಂಗ್ರೆಸ್‌ನಲ್ಲಿ ಭಿನ್ನಮತ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಎಚ್‌ಡಿಕೆ, ಅದರ ಅಡ್ವಾಂಟೇಜ್‌ ನಮ್ಮ ಪಕ್ಷಕ್ಕೆ ಆಗಬಹುದು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com