ಚುನಾವಣೆ ಗೆದ್ದರೆ ಚಾಮರಾಜನಗರದಲ್ಲೇ ಮನೆ ಮಾಡ್ತೇನೆ : ವಾಟಾಳ್ ನಾಗರಾಜ್

ಚಾಮರಾಜನಗರದಲ್ಲಿ ವಾಟಾ ಳ್ ನಾಗರಾಜು ಹೇಳಿಕೆ ನೀಡಿದ್ದಾರೆ. ‘ ಚಾಮರಾಜನಗರದಲ್ಲಿ ನನಗೆ ಸೋಲೆ ಜಾಸ್ತಿ. ನಾನು ಗೆದ್ದರೆ ಸರ್ಕಾರದ ಎಲ್ಲ ಜಯಂತಿಗ ಳನ್ನು ನಾನೇ ಮಾಡಿಸ್ತೇನೆ. ಚಾಮರಾಜನಗರಕ್ಕೆ ಕುಡಿಯಲು ಕಾವೇರಿ ನೀರು ತಂದವನು ವಾಟಾಳ್ ನಾಗರಾಜ್, ಕಾವೇರಿ ನೀರು ತಂದವನನ್ನು ಸೋಲಿಸೊದು ಯಾವ ನ್ಯಾಯ ‘ ಎಂದು ಕೇಳಿದ್ದಾರೆ.

‘ ಟಿಪ್ಪು ಜಯಂತಿ ಆಚರಣೆಗೆ ಕಾರಣವಾದವರು ವಾಟಾಳ್ ನಾಗರಾಜು. ರಾಜ್ಯದಲ್ಲಿ ಪರಮ ಪವಿತ್ರ ರಾ ಜಕಾರಣಿ ಯಾರೆಂದರೆ ಅದು ವಾಟಾಳ್ ನಾಗರಾಜ್. ನನಗೆ ಸಿಎಂ ಆಗುವ ಆಸೆ ಇಲ್ಲ. ಜೈಲೇ ನನ್ನ ಮನೆ ‘

‘ ನಾನು ಒಬ್ಬರ ಬಳಿಯೂ ಎಂಜಲಿಗೆ ಆಸೆ ಪಡಲಿಲ್ಲ. ನನ್ನ 52 ವರ್ಷದಲ್ಲಿ ಒಂದು ಕಪ್ಪು ಚುಕ್ಕೆ ತೋರಿಸಿ. ನಾನೊಬ್ಬ ಗೆದ್ದರೆ 200ಜನ ಶಾ ಸಕರ ಕೆಲಸ ಮಾಡ್ತೇನೆ. ಮತದಾರರೇ ನೀವು ಯಾರ ಮಾತನ್ನು ಕೇಳಬೇಡಿ. ನನ್ನನ್ನು ಬೆಂಬಲಿಸಿ ‘

‘ ನಾನು ಗೆದ್ದರೆ ಚಾಮರಾಜನಗರದಲ್ಲಿ ಉಪ ನಗರ ನಿರ್ಮಾಣ ಮಾಡುತ್ತೇನೆ. ನನ್ನನ್ನು ನಿಮ್ಮವನಾಗಿ ಮಾಡಿ ಕೊಳ್ಳಿ. ಚುನಾವಣೆಯಲ್ಲಿ ನನ್ನನ್ನು ಧೈರ್ಯವಾಗಿ ಗೆಲ್ಲಿಸಿ. ನಾನು ನಿಮ್ಮಜೊತೆ ಯಾವಾಗಲೂ ಇರ್ತೇನೆ, ಗೆದ್ದ ಮೇಲೆ ಚಾಮರಾಜನಗರ ದಲ್ಲೇ ಮನೆ ಮಾಡ್ತಿನಿ ‘ ಎಂದರು.

Leave a Reply

Your email address will not be published.