Surat : 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ : 80ಕ್ಕೂ ಹೆಚ್ಚು ಗಾಯಗಳುಳ್ಳ ಮೃತದೇಹ ಪತ್ತೆ

ಜಮ್ಮು ಕಾಶ್ಮೀರದ ಕಠುವಾದಲ್ಲಿ ನಡೆದ 8 ವರ್ಷದ ಬಾಲಕಿ ಆಸಿಫಾ ಅತ್ಯಾಚಾರದ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಮತ್ತೊಂದು ಅತ್ಯಾಚಾರ ಕೃತ್ಯ ಬೆಳಕಿಗೆ ಬಂದಿದೆ. ಗುಜರಾತ್ ರಾಜ್ಯದ ಸೂರತ್ ನಲ್ಲಿ 9 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈಯಲಾಗಿದೆ.

ಮೈ ಮೇಲೆ 80 ಕ್ಕೂ ಹೆಚ್ಚು ಗಾಯಗಳನ್ನು ಹೊಂದಿರುವ ಅತ್ಯಾಚಾರ ಸಂತ್ರಸ್ತ ಬಾಲಕಿಯ ಮೃತದೇಹ ಪತ್ತೆಯಾಗಿದೆ. 5 ಗಂಟೆಗಳವರೆಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ‘ ಸಾವಿಗೆ ಮುನ್ನ ಬಾಲಕಿಯ ಮೇಲೆ ಸತತ 8 ದಿನಗಳವರೆಗೆ ಅತ್ಯಾಚಾರ ಎಸಗಿ, ಕಿರುಕುಳ ನಡೆಸಲಾಗಿದೆ ‘ ಎಂಬ ಮಾಹಿತಿ ಮರಣೋತ್ತರ ಪರೀಕ್ಷೆಯಿಂದ ವರದಿ ಬಂದಿದೆ.

ಗುಜರಾತಿನ ಸೂರತ್ ಜಿಲ್ಲೆಯ ಭೇಸ್ತಾ ಪ್ರದೇಶದಲ್ಲಿ ಏಪ್ರಿಲ್ 6ನೇ ತಾರೀಖಿನಂದು ಪೋಲೀಸರಿಗೆ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಇದುವರೆಗೆ ಆಕೆಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com