‘ ಮಾತಿನಲ್ಲಿ ಎಚ್ಚರಿಕೆ, ನಾಲಿಗೆ ಮೇಲೆ ನಿಗಾ ಇರ್ಲಿ ‘ : ಗುಂಡೂರಾವ್ ಗೆ ಪ್ರತಾಪ್ ಸಿಂಹ ಎಚ್ಚರಿಕೆ

‘ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಬೇಕು ‘ ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಕೆಂಡ ಕಾರಿದ್ದಾರೆ. ‘ ಯೋಗಿ ಆದಿತ್ಯನಾಥರಿಗೆ ಚಪ್ಪಲಿಯಲ್ಲಿ ಹೊಡಿಬೇಕು ಅಂದಿದ್ದೀರಲ್ಲ ದಿನೇಶ್ ಗುಂಡೂರಾವ್. ಇದೇ ಮಾತನ್ನು ಯೋಗಿ ಬದಲು ಒಬ್ಬ ಮುಲ್ಲಾನೋ, ಮೌಲ್ವಿ ಬಗ್ಗೆನೋ ಆಡಿದ್ರೆ, ನಿಮ್ಮ ಹೆಂಡತಿ ಬೇಗಂ ತಬ್ಬು ಅವರೇ ಆ ಕೆಲಸ ನಿಮಗೆ ಮಾಡಿರುತ್ತಿದ್ದರು ‘

‘ ಮಾತಿನಲ್ಲಿ ಎಚ್ಚರಿಕೆ ಇರಬೇಕು. ನಾಲಗೆ ಮೇಲೆ ನಿಗಾ ಇರಲಿ. ಇಲ್ಲ ಅಂದ್ರೆ ತಕ್ಕ ಪಾಠ ಕಲಿಸಬೇಕಾಗುತ್ತೆ ‘ ಎಂದು ಫೇಸ್‌ಬುಕ್‌ ಲೈವ್ ಮೂಲಕ ದಿನೇಶ್ ಗುಂಡೂರಾವ್ ಗೆ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ. ಫೇಸ್‌ಬುಕ್‌ ನಲ್ಲಿ ವಿಡಿಯೋ ಇದೆ.

Leave a Reply

Your email address will not be published.

Social Media Auto Publish Powered By : XYZScripts.com