ಮಂಗಳೂರು : ಸಾಲ ಬಾಕಿ ಕೇಳಿದ ಹೋಟೇಲ್ ಮಾಲೀಕನ ಮೇಲೆ ಕಾದ ಎಣ್ಣೆ ಎರಚಿದ ವ್ಯಕ್ತಿ

ಸಾಲ ಬಾಕಿ ಕೇಳಿದ್ದಕ್ಕಾಗಿ ಹೋಟೆಲ್ ಮಾಲಿಕನಿಗೆ ಕಾದ ಎಣ್ಣೆ ಎರಚಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ‌ ನಡೆದಿದೆ. ರಮಿತ್ ಎಂಬಾತನ ಮೇಲೆ ಕೃತ್ಯ ಎಸಗಿರುವ ಆರೋಪವಿದೆ.  ಗಾಯಗೊಂಡ ಹೊಟೇಲ್ ಮಾಲಿಕ ಗಫೂರ್ ಆವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಫಾಸ್ಟ್ ಫುಡ್ ಹೊಟೇಲ್ ನಲ್ಲಿ ರಮಿತ್ 500 ರೂಪಾಯಿ ಸಾಲ ಮಾಡಿದ್ದ. ಸಾಲ ಬಾಕಿ ಕೇಳಿದಕ್ಕಾಗಿ ಹೊಟೇಲ್ ಮಾಲಿಕನಿಗೆ ಬೆದರಿಕೆ ಹಾಕಿದ್ದಾನೆ. ಈ ಕುರಿತಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಫೂರ್ ದೂರು ನೀಡಿದ್ದರು.

ಇದರಿಂದ ಕೋಪಕೊಂಡಿದ್ದ ಆರೋಪಿ ರಮಿತ್  ಇಂದು ಹೊಟೇಲ್ ಗೆ ಬಂದು ಗಫೂರ್ ಮೇಲೆ ಕಾದ ಎಣ್ಣೆ ಎರಚಿದ್ದಾನೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com