ನನ್ನ ಅವಧಿಯಲ್ಲಿ ಯಾರೂ ಮಾಡದ ಅಭಿವೃದ್ಧಿ ಕೆಲಸ ಮಾಡಿದ್ದೇನೆ : ಎಚ್ ಡಿಕೆ

ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಚ್.ಡಿ ಕುಮಾರಸ್ವಾಮಿ ಎರಡನೇ ದಿನದ ಪ್ರಚಾರಕ್ಕಿಳಿದಿದ್ದಾರೆ. ಚಾಮುಂಡೇಶ್ವರಿಯಲ್ಲಿ ತೆನೆ ಪಕ್ಷದಿಂದ ಭರ್ಜರಿ ಮತಯಾಚನೆ ಮಾಡಿ ಎಚ್ ಡಿಕೆ ಸಿಎಂ ಭದ್ರ ಕೋಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗಾಗಿ ಅಬ್ಬರದ ಪ್ರಚಾರ ನಡೆಸಿದ್ದಾರೆ.

‘ ಕಳೆದ 5 ವರ್ಷಗಳಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಜನಪರ ಯೋಜನೆ ಜಾರಿಗೆ ತಂದಿಲ್ಲ. ನಾನು 20 ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ ಅವಧಿಯಲ್ಲಿ ಯಾರು ಮಾಡದ ಅಭಿವೃದ್ಧಿ ಕೆಲಸ ಮಾಡಿದ್ದೇನೆ.

‘ ನಮ್ಮನ್ನೇನಾದರೂ ರಾಜ್ಯದ ಮುಖ್ಯಮಂತ್ರಿ ಮಾಡಿದ್ದೇ ಆದಲ್ಲಿ ಮಹಿಳೆಯರಿಗೆ, ಬಾಣಂತಿಯರಿಗೆ, ವೃದ್ಧರಿಗೆ ತಲುಪುವ ಯೋಜನೆ ಜಾರಿಗೆ ತರುತ್ತೇವೆ. ಕಳೆದ ಹತ್ತು ವರ್ಷದಲ್ಲಿ ಲೂಟಿ ಮಾಡುವ ಪಕ್ಷವನ್ನು ಆಯ್ಕೆ ಮಾಡಿದ್ದೀರಿ. ಈ ಬಾರಿ ಜಿಟಿಡಿಗೆ ಮತ ಹಾಕಿ ನನ್ನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿ ‘ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com