ಶ್ರೀರಾಮುಲು ನಿನ್ನನ್ನು ಸೋಲಿಸಿ ಬಳ್ಳಾರಿಗೆ ಕಳಿಸುತ್ತೇನೆ : ಎಸ್. ತಿಪ್ಪೇಸ್ವಾಮಿ

‘ ಕಾಂಗ್ರೆಸ್ ಟಿಕೆಟ್ ನೀಡಿದರೆ ಕಾಂಗ್ರೇಸ್ ಇಲ್ಲವಾದರೆ ಸ್ವತಂತ್ರ ಅಭ್ಯರ್ಥಿ ಯಾಗಿ ಸ್ಪರ್ಧಿಸುವೆ ‘ ಎಂದು ಎಸ್.ತಿಪ್ಪೇಸ್ವಾಮಿ ಹೇಳಿಕೆ ನೀಡಿದ್ದಾರೆ. ಮ್ಯಾಸ ನಾಯಕರ ಕುಲದಲ್ಲಿ ಹುಟ್ಟಿದವನು ನಾನು. ಶ್ರೀರಾಮುಲು ನಿನ್ನದು ಯಾವುದು ಕಟ್ಟೇಮನೆ ಹೇಳು? ‘ ಶಾಸಕ ಎಸ್.ತಿಪ್ಪೇಸ್ಚಾಮಿ ಸವಾಲು ಹಾಕಿದ್ದಾರೆ.

‘ ಶ್ರೀರಾಮುಲು ನಿನ್ನನ್ನು ನಾನು ಸೋಲಿಸೇ ಸೋಲಿಸುತ್ತೇನೆ. ನನ್ನ ಅಕ್ಕ ತಂಗಿಯರಿಗೆ, ಅಣ್ಣ ತಂಗಿಯರಿಗೆ ಕಾಲು ಹಿಡಿಯುತ್ತೇನೆ. ನಿನ್ನನ್ನು ಸೋಲಿಸಿ ಬಳ್ಳಾರಿಗೆ ಕಳಿಸುತ್ತೇನೆ. ನನ್ನ ತಮ್ಮನ ಕೈಯಲ್ಲಿ ಉಂಡು ನಮಗೆ ದ್ರೋಹ ಮಾಡಿದ್ದೀರಿ. ನನ್ನ ತಮ್ಮನನ್ನೇ ಜೈಲಿಗೆ ಕಳಿಸಿದ್ದೀರಿ ‘

‘ ರಕ್ತದಲ್ಲಿ ಬರೆದು ಕೊಡುತ್ತೇನೆ ಅಂತ ಪದೇಪದೇ ಹೇಳ್ತೀರಿ. ಶ್ರೀರಾಮುಲು ನಿಮ್ಮದು ಯಾವ ರಕ್ತ. ಮೋಸ, ಕೊಟ್ಟ ಮಾತು ತಪ್ಪುವ ರಕ್ತ ಅದು. ಕ್ಷೇತ್ರದಲ್ಲಿ ನನ್ನ ಸಂಬಂಧಿಕರೇ 40 ಸಾವಿರ ಜನರಿದ್ದಾರೆ. ಉಳಿದೆಲ್ಲಾ ಸಮುದಾಯದವರೂ ನನ್ನ ಜೊತೆಗಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ‘

‘ ಕೊನೆಯದಾಗಿ ಹೇಳ್ತಿನಿ ನನ್ನ ಬಗ್ಗೆ ಮಾತಾಡಿದರೆ ನಿಮ್ಮ ಜಾತಕ ಏಳೆ ಏಳೆಯಾಗಿ ಬಿಚ್ಚಿಡುವೆ. ನಿಮ್ಮ ಪಾಡಿಗೆ ನೀವು ಇದ್ದರೆ ಸೂಕ್ತ ‘ ಎಂಧು ಶ್ರೀರಾಮುಲುಗೆ ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com