ಯಾವುದೇ ಕಾರಣಕ್ಕೂ ಜಾತಿ ಮೀಸಲಾತಿ ತೆಗೆಯುವುದಿಲ್ಲ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ. ‘ ಯಾವುದೇ ಕಾರಣಕ್ಕೂ ಜಾತಿ ಮೀಸಲಾತಿಯನ್ನು ತೆಗೆಯುವುದಿಲ್ಲ. ಸದ್ಯ ಮೀಸಲಾತಿ ಹೇಗಿದಿಯೋ ಹಾಗೆ ಮುಂದುವರಿಯುತ್ತೆ. ಸಮಾಜದಲ್ಲಿ ಸಮಾನತೆ ಬರುವವರೆಗೂ ಮೀಸಲಾತಿ ಮುಂದುವರಿಯುತ್ತೆ ‘ ಎಂದು ಹೇಳಿದ್ದಾರೆ.

‘ ಕಾಂಗ್ರೆಸ್‌ನವರು ಮಿಸಲಾತಿ ಬಗ್ಗೆ ಗೊಂದಲ ಸೃಷ್ಟಿ ಮಾಡಿದ್ದಾರೆ. ಇಂತಹ ಗೊಂದಲ ಸೃಷ್ಟಿ ಮಾಡಿದವರ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ. ಇನ್ನೂ ಮುಂದೆಯೂ ದಲಿತರ ಪರವಾಗಿ ನಿಂತು ಹೋರಾಡುತ್ತೇವೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಅಮಿತ್ ಶಾ ಸೂಚನೆ ನೀಡಿದ್ದಾರೆ ‘ ಎಂದಿದ್ದಾರೆ.

‘ ಬಂಡಾಯ ಅಭ್ಯರ್ಥಿಗಳ ಬಗ್ಗೆ ಆಗಲಿ, ಪಕ್ಷದಲ್ಲಿನ ಭಿನ್ನಮತದ ಬಗ್ಗೆ ಚರ್ಚೆ ನಡೆಸಿಲ್ಲ. ಈ ಬಗ್ಗೆ ಸಂಘ ಪರಿವಾರದ ಪ್ರಮುಖರ ಜೊತೆಯೂ ಚರ್ಚೆ ಆಗಿಲ್ಲ.
ನಮ್ಮದು ಗೆಲ್ಲುವ ಪಕ್ಷ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com