ಕೆ.ಎಸ್ ಪುಟ್ಟಣ್ಣಯ್ಯ ಅವರಿಗೆ ಮರಣೋತ್ತರ ‘ ಬೋಧಿವೃಕ್ಷ ‘ ಪ್ರಶಸ್ತಿ..

ಮಂಡ್ಯ : ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಮರಣೋತ್ತರ ಬೋಧಿವೃಕ್ಷ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಸ್ಫೂರ್ತಿ ಸಂಸ್ಥೆಯ ವತಿಯಿಂದ ನೀಡುವ ಪ್ರಶಸ್ತಿಗೆ ದಿ. ಪುಟ್ಟಣ್ಣಯ್ಯ ಆಯ್ಕೆಯಾಗಿದ್ದಾರೆ.

ಇಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುಟ್ಟಣ್ಣಯ್ಯ ಅವರ ಪರವಾಗಿ ಪತ್ನಿ ಸುನೀತಾ ಪುಟ್ಟಣ್ಣಯ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಶ್ರಮಿಕರ, ದುಡಿಯುವ ವರ್ಗದ ಪರವಾಗಿ ಕೆಲಸ‌ ಮಾಡಿದ ವ್ಯಕ್ತಿಯನ್ನು ಗುರುತಿಸಿ ನೀಡುವ ರಾಷ್ಟ್ರಮಟ್ಟದ ಬೋಧಿವೃಕ್ಷ ಪ್ರಶಸ್ತಿ ನೀಡಲಾಗುತ್ತದೆ. ರೈತಪರ ಚಿಂತಕ, ಹೋರಾಟಗಾರ ಹಾಗೂ ಶೋಷಿತರ ದನಿಯಾಗಿದ್ದ ಕೆ.ಎಸ್. ಪುಟ್ಟಣ್ಣಯ್ಯ ಸೇವೆಗಾಗಿ ಬೋಧಿವೃಕ್ಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೆ ಎಸ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದ ರೈತ ಶಾಸಕರಾಗಿದ್ದರು.

Leave a Reply

Your email address will not be published.