ಮೋದಿ, ಅಮಿತ್ ಷಾ ನಾಯಕತ್ವದಲ್ಲಿ ರಾಜ್ಯದಲ್ಲಿ BJP ಅಧಿಕಾರಕ್ಕೆ ಬರಲಿದೆ : ಈಶ್ವರಪ್ಪ

ಶಿವಮೊಗ್ಗದ ವಿವಿಧ ಮಠಗಳಿಗೆ ಭೇಟಿ ನೀಡಿ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ‘ ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಷಾ ರಾಜ್ಯ ಪ್ರವಾಸ ನಡೆಸುತ್ತಿದ್ದಾರೆ. ರಾಜ್ಯಕ್ಕೆ ಚಾಣಕ್ಯ ಅಮಿತ್ ಷಾ ಮಾತ್ರ ಬಂದಿರುವುದಷ್ಟೆ. ಇನ್ನೂ ಚಂದ್ರಗುಪ್ತ ನರೇಂದ್ರ ಮೋದಿ ರಾಜ್ಯಕ್ಕೆ ಬರುವವರಿದ್ದಾರೆ. ಅವರಿಬ್ಬರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ‘ ಎಂದಿದ್ದಾರೆ.

‘ ಮುಂದಿನ ಸಿಎಂ ಯಡಿಯೂರಪ್ಪ ಆಗುತ್ತಾರೆ. ಸಮೀಕ್ಷೆಯನ್ನು ಬಿಜೆಪಿ ನಂಬಲ್ಲ. ಹಿಂದಿನ ಸಮೀಕ್ಷೆಯನ್ನು ಸುಳ್ಳು ಮಾಡಿ ಬಿಜೆಪಿ ಉತ್ತರ ಭಾರತದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯಲ್ಲಿ ಸಣ್ಣ ಪುಟ್ಟ ಭಿನ್ನಮತವನ್ನು ಬಗೆ ಹರಿಸಲಾಗುವುದು. ಮೂಳಕಾಲ್ಮೂರಿನ ಭಿನ್ನಮತವನ್ನು ಕಾಂಗ್ರೆಸ್ ದುರುಪಯೋಗ ಪಡೆಸಿಕೊಳ್ಳುತ್ತಿದೆ ‘ ಎಂದರು.

Leave a Reply

Your email address will not be published.