ಸಂವಿಧಾನವನ್ನು ಬದಲಾಯಿಸಲು ಎಂದೆಂದೂ ಬಿಡುವುದಿಲ್ಲ : ಪ್ರಕಾಶ್ ರೈ

ಕಲಬುರ್ಗಿಯಲ್ಲಿ ಬಹುಭಾಷೆ ನಟ ಪ್ರಕಾಶ ರೈ ಹೇಳಿಕೆ ನೀಡಿದ್ದಾರೆ. ಪರೋಕ್ಷವಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಪ್ರೀತಿಯಿಂದ ನನ್ನನ್ನು ಕರೆದ ನಿಮಗೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

‘ ನಾನು ಯುವ ಜನಾಂಗದ ನಾಳೆಗಳ ಬಗ್ಗೆ ಮಾತನಾಡುತ್ತೇನೆ. ಬೆಳಗಾಂವದ ಅನಾಥಾಶ್ರಮದಲ್ಲಿ ನಮ್ಮ ತಾಯಿ ಓದುತ್ತಾಳೆ. ಅದಕ್ಕೆ ಅವಕಾಶ ಒದಗಿಸಿಕೊಟ್ಟಿದ್ದು ಅಂಬೇಡ್ಕರ್ ರ ಸಂವಿಧಾನ. ಇಂತಹ ಸಂವಿಧಾನ ಬದಲಾಯಿಸುತ್ತೇನೆ ಅಂದ್ರೆ ಬಿಡ್ತಿನಾ…ಬಿಡ್ತಿವಾ..? ‘ ಎಂದು ಕೇಳಿದ್ದಾರೆ.

‘ ಸಮೂದಾಯದ ಸಲುವಾಗಿ ಕೊನೆಯತನಕ ಇರುವವರಿಗೆ ಹೋರಾಟ ಮಾಡ್ತೇನೆ. ನಿಜವಾದ ಗಣ್ಯರು ಬುದ್ದ, ಬಸವಣ್ಣ, ಅಂಬೇಡ್ಕರ್. ಮಾನ ಮಾರ್ಯದೆ ಇರೋರಿಗೆ ಹೆಸರು ಹೇಳ್ಬೇಕು. ಆದ್ರೆ ಮಾನ ಮಾರ್ಯಾದೆ ಇಲ್ಲದವರ ಹೆಸರು ಹೇಳೋದೇ ಬೇಡ ‘ ಎಂದರು.

‘ ಮಹಿಳೆಯರು, ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ನಡೆಯುತ್ತಿದ್ದರೂ ಕಣ್ಣು ಮುಚ್ಚಿಕೊಂಡಿದ್ದಿರಿ. ಕಾಶ್ಮೀರ ದಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ನಡೆದರೂ ತಲೆ ಕೆಡಿಸಿಕೊಂಡಿಲ್ಲ. ಗೋವು ಮೂತ್ರ ಪವಿತ್ರ ಅಂದ್ರೆ ಅದ್ರಿಂದಲೇ ಸ್ಥಾನ ಮಾಡಿ, ನಿಮ್ಮ ಬಟ್ಟೆ ಅದರಿಂದ ತೊಳೆದುಕೊಳ್ಳಿ ‘ ಎಂದಿದ್ದಾರೆ.

Leave a Reply

Your email address will not be published.