ವಿಜಯಪುರ : ಸ್ವಾಮೀಜಿಗಳಿಂದ ನೀತಿ ಸಂಹಿತೆ ಉಲ್ಲಂಘನೆ : ಚುನಾವಣಾ ಅಧಿಕಾರಿಗಳಿಗೆ ದೂರು

ವಿಜಯಪುರ : ಬಬಲೇಶ್ವರ ಮತಕ್ಷೇತ್ರದಲ್ಲಿ ಸ್ವಾಮಿಜಿಗಳಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ. ಶ್ರೀಶೈಲ ಜಗದ್ಗರುಗಳು ಹಾಗೂ ಬಬಲೇಶ್ವರ ಮಠದ ಮಹಾದೇವ ಶಿವಾಚಾರ್ಯ ರಿಂದ ಪರವಾನಿಗೆ ಪಡೆಯದೇ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.

ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಾಗಿದ್ದು, ‘ ಧರ್ಮ ಒಡೆಯುವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ‘ ಎಂದು ಹೇಳಿ ಧರ್ಮದ ಆಧಾರದ ಮೇಲೆ ಮತದಾರರ ಭಾವನೆ ಕೆರಳಿಸಿದ ಆರೋಪ ಎದರಾಗಿದೆ.

ಮತದಾರರಿಗೆ ವಿಭೂತಿ, ಲಿಂಗ ವಿತರಿಸುವ ಮೂಲಕ ಆಮೀಷ ಒಡ್ಡಲಾಗಿದ್ದು, ಸಚಿವ ಎಂ.ಬಿ.ಪಾಟೀಲರಿಗೆ ಪಾಠ ಕಲಿಸುತ್ತೇವೆ ಎಂದು ಪಾದ ಮುಟ್ಟಿ ಪ್ರಮಾಣ ಮಾಡುವಂತೆ ಒತ್ತಡ ಹೇರುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ನೀತಿ ಸಂಹಿತೆ ಉಲ್ಲಂಘಿಸುವ ಸ್ವಾಮಿಜಿಗಳ ವಿರುದ್ದ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದ್ದು, ಸ್ವಾಮೀಜಿಗಳು ಭೇಟಿ ನೀಡುವ ಸ್ಥಳಗಳ ವಿಡಿಯೋ ಚಿತ್ರೀಕರಣಕ್ಕೆ ಒತ್ತಾಯ ಪಡಿಸಲಾಗಿದೆ.

‘ ಮತಕ್ಷೇತ್ರದಲ್ಲಿ ಸಂಚರಿಸುವಾಗ ಪರವಾನಿಗೆ ಪಡೆದಿದ್ದಾರೆಯೇ ಎಂಬುದರ ಕುರಿತು ಪರಿಶೀಲಿಸಲು ಒತ್ತಾಯಿಸಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಬಲೇಶ್ವರ ನಿರ್ವಾಚನಾಧಿಕಾರಿಗಳಿಗೆ ಬಬಲೇಶ್ವರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷೆ ವಿದ್ಯಾರಾಣಿ ತುಂಗಳ ದೂರು ನೀಡಿದ್ದಾರೆ.

2 thoughts on “ವಿಜಯಪುರ : ಸ್ವಾಮೀಜಿಗಳಿಂದ ನೀತಿ ಸಂಹಿತೆ ಉಲ್ಲಂಘನೆ : ಚುನಾವಣಾ ಅಧಿಕಾರಿಗಳಿಗೆ ದೂರು

Leave a Reply

Your email address will not be published.