CM ವಿರುದ್ದ ಅಖಾಡಕ್ಕೆ ವಿಜಯಲಕ್ಷ್ಮಿ ಸರೂರ : ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧಾರ

ಬಾಗಲಕೋಟೆ ಶಾಸಕ ಹೆಚ್ ವೈ ಮೇಟಿ ರಾಸಲೀಲೆ ಸಂತ್ರಸ್ತೆ ವಿಜಯಲಕ್ಷ್ಮಿ ಸರೂರ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಸಿಎಮ್ ಸಿದ್ದರಾಮಯ್ಯ ವಿರುದ್ದ ಅಖಾಡಕ್ಕೆ ಇಳಿಯಲು ವಿಜಯಲಕ್ಷ್ಮಿ ಸಿದ್ಧರಾಗಿದ್ದಾರೆ.

ಈ ಹಿಂದೆ ಮೇಟಿ ವಿರುದ್ಧ ಬಾಗಲಕೋಟೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಈಗ ಬಾಗಲಕೋಟೆ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸೋದಾಗಿ ಹೇಳಿಕೆ ನೀಡಿದ್ದಾರೆ.

ಸಿಎಮ್ ಬಾದಾಮಿ ಕ್ಷೇತ್ರ ಖಚಿತವಾಗುತ್ತಿದ್ದಂತೆ ರೆಡಿಯಾದ ವಿಜಯಲಕ್ಷ್ಮಿ ಸರೂರ ‘ ಯಾವುದೇ ಆಸೆ ಆಮಿಷಗಳಿಗೆ ಒಳಗಾಗೋದಿಲ್ಲ. ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾವುದೇ ಪಕ್ಷದವರು ಸಿಎಮ್ ವಿರುದ್ದ ನಿಲ್ಲಲು ಪ್ರೇರೇಪಿಸಿಲ್ಲ. ಬಾದಾಮಿ ಕ್ಷೇತ್ರದ ಕುರುಬ ಸಮುದಾಯದ ಜನರ ಒತ್ತಾಯವಿದೆ ‘ ಎಂದು ಹೇಳಿದ್ದಾರೆ.

ರಾಸಲೀಲೆ ಕ್ಲೀನ್ ಚಿಟ್ ಸೇಡು ತೀರಿಸಿಕೊಳ್ಳಲು ಮುಂದಾದ ಸಂತ್ರಸ್ತೆ ‘ ಸಿಎಮ್ ,ಮೇಟಿ ವಿರುದ್ದ ಸ್ಪರ್ಧಿಸದಂತೆ ಬೆದರಿಕೆ ಇದೆ. ಆದರೆ ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯೋದಿಲ್ಲ ‘ ಎಂದಿದ್ದಾರೆ.

9 thoughts on “CM ವಿರುದ್ದ ಅಖಾಡಕ್ಕೆ ವಿಜಯಲಕ್ಷ್ಮಿ ಸರೂರ : ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧಾರ

Leave a Reply

Your email address will not be published.

Social Media Auto Publish Powered By : XYZScripts.com