ಮಿಥಾಲಿ ರಾಜ್, ವಿರಾಟ್ ಕೊಹ್ಲಿಗೆ ‘ ವಿಸ್ಡನ್ ವರ್ಷದ ಕ್ರಿಕೆಟರ್ ‘ ಗೌರವ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರನ್ನು ‘ ವಿಸ್ಡನ್ ವರ್ಷದ ಕ್ರಿಕೆಟರ್ ‘ ಪ್ರಶಸ್ತಿಗೆ ಹೆಸರಿಸಲಾಗಿದೆ. ಕಳೆದ ಬಾರಿಯೂ ವಿಸ್ಡನ್ ವರ್ಷದ ಕ್ರಿಕೆಟರ್ ಎನಿಸಿದ್ದ ವಿರಾಟ್ ಕೊಹ್ಲಿ ಎರಡನೇ ಬಾರಿ ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.

2017 ರಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ಧ ರನ್ ಮಷಿನ್ ವಿರಾಟ್ ಕೊಹ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಸೇರಿದಂತೆ ಮೂರು ಮಾದರಿಗಳಲ್ಲಿ ಒಟ್ಟು 2818 ರನ್ ಗಳಿಸಿದ್ದರು.

ಕಳೆದ ವರ್ಷ ನಡೆದ ಮಹಿಳಾ ವಿಶ್ವಕಪ್ ನಲ್ಲಿ ಭಾರತವನ್ನು ಫೈನಲ್ ವರೆಗೆ ಮುನ್ನಡೆಸಿದ್ದ ಮಿಥಾಲಿ ರಾಜ್, ಮಹಿಳೆಯರ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com