ಡೇಟಾ ಆಯ್ತು, ಫೋನ್ ಆಯ್ತು…ಈಗ ಸಿಮ್ ಇರೋ ಲ್ಯಾಪ್ಟಾಪ್ ಬಿಡುಗಡೆ ಮಾಡಲಿದೆ ಜಿಯೋ !
ದೆಹಲಿ : ಕಡಿಮೆ ಬೆಲೆಯಲ್ಲಿ ಡೇಟಾ, ಉಚಿತ ಕರೆಗಳನ್ನು ನೀಡಿದ್ದಲ್ಲೆ 4 ಜಿ ಫೀಚರ್ನ ಫೋನ್ ಬಿಡುಗಡೆ ಮಾಡಿದ್ದ ಜಿಯೋ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅತೀ ಕಡಿಮೆ ಬೆಲೆಯಲ್ಲಿ ಭಾರತದ ಮಾರುಕಟ್ಟೆಗೆ ಸಿಮ್ ಹೊಂದಿರುವ ಲ್ಯಾಪ್ ಟಾಪ್ ಬಿಡುಗಡೆಗೆ ತಯಾರಿ ನಡೆಸಿದೆ.
ವಿಂಡೋಸ್ 10 ಒಎಸ್ ಇರುವ ಲ್ಯಾಪ್ಟಾಪ್ಗಳಲ್ಲಿ ಸಿಮ್ಗಳನ್ನು ಅಳವಡಿಸುವುದರ ಕುರಿತು ರಿಲಯನ್ಸ್ ಜಿಯೋ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ.
ಅಲ್ಲದೆ ಜಿಯೋ ಸಂಸ್ಥೆ ಜೊತೆ ಕ್ಯಾತ ಚಿಪ್ ತಯಾರಿಕಾ ಕಂಪನಿ ಕ್ವಾಲ್ಕಾಮ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಲ್ಯಾಪ್ ಟಾಪ್ ಸದಾ ಇಂಟರ್ನೆಟ್ ಜೊತೆ ಸಂಪರ್ಕ ಹೊಂದಿರುವ ವ್ಯವಸ್ಥೆ ಮಾಡಲಾಗುತ್ತಿದೆ.
ಇತರೆ ಲ್ಯಾಪ್ಟಾಪ್ಗಳನ್ನು ಕೊಂಡೊಯ್ಯುವಾಗ ವೈಫೈ ಇರದೆಡೆ ಮೊಬೈಲ್ ಹಾಟ್ಸ್ಪಾಟ್ ಬಳಕೆ ಮಾಡಿಕೊಂಡು ಇಂಟರ್ನೆಟ್ ಪಡೆಯಬೇಕು. ಆದರೆ ಈ ಲ್ಯಾಪ್ಟಾಪ್ನಲ್ಲೇ ಸಿಮ್ಮನ್ನು ಹಾಕಿರುವುದರಿಂದ ಆ ಸಮಸ್ಯೆ ಬಗೆಹರಿಯಲಿದೆ.