ಜೆಡಿಎಸ್‌ ಹಾಗೂ ಬಿಜೆಪಿಯನ್ನು ನಾಯಿಗೆ ಹೋಲಿಸಿದ ಮುಖ್ಯಮಂತ್ರಿ ಚಂದ್ರು !!

ಮೈಸೂರು : ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಜೆಡಿಎಸ್‌ ಹಾಗೂ ಬಿಜೆಪಿಯನ್ನು ನಾಯಿಗೆ ಹೋಲಿಸುವ  ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.

ನಾವು ಇನ್ನು ಮುಂದೆ ನಮ್ಮ ಮನೆಯ ಬಾಗಿಲಿಗೆ ನಾಯಿ ಇದೆ ಎಚ್ಚರಿಕೆ ಎನ್ನುವ ಬದಲು, ಬಿಜೆಪಿಯಿದೆ ಎಚ್ಚರಿಕೆ , ಜೆಡಿಎಸ್‌ ಇದೆ ಎಚ್ಚರಿಕೆ ಎಂದು ಬೋರ್ಡ್‌ ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಸಿಎಂ ಸಿದ್ದರಾಮಯ್ಯ, ಮೈಸೂರಿನ ಆಂದೋಲನ ವೃತ್ತದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರೊಂದಿಗೆ ವೇದಿಕೆ ಹಂಚಿಕೊಂಡು ಮಾತನಾಡಿದ ಅವರು,  ಕ್ವಿಟ್ ಇಂಡಿಯಾದ ಮೂಲಕ ಬ್ರಿಟೀಷರೇ ದೇಶ ಬಿಟ್ಟು ತೊಲಗಿ ಎನ್ನುತ್ತಿದ್ದೆವು. ಈಗ ಬಿಜೆಪಿಯವರೇ ಭಾರತ ಬಿಟ್ಟು ತೊಲಗಿ, ಜೆಡಿಎಸ್‌ನವರೇ ಜಾತಿ ಬಿಟ್ಟು ತೊಲಗಿ ಎನ್ನಬೇಕಾಗಿದೆ. ಒಂದು ಕಡೆ ಕೋಮುವಾದ ಮತ್ತೊಂದು ಕಡೆ ಜಾತಿವಾದ ನಡೆಯುತ್ತಿದೆ. ಎಲ್ಲರನ್ನೂ ಒಂದಾಗಿ ಕರೆದುಕೊಂಡು ಹೋಗೋದು ಮಾತ್ರ ಕಾಂಗ್ರೆಸ್‌ ಎಂದು ಕಾಂಗ್ರೆಸ್‌ ಸರ್ಕಾರವನ್ನು ಹೊಗಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com