ಸಾಲ ತೀರಿಸಲು ಪತ್ನಿಯನ್ನೇ ಅಡವಿಟ್ಟ ಪತಿರಾಯ….ಆಮೇಲಾಗಿದ್ದೇನು ?

ಜೈಪುರ : ಸಾರಾಯಿ ಚಟಕ್ಕೆ ಬಿದ್ದಿದ್ದ ಪತಿಯೊಬ್ಬ ತಾನು ಮಾಡಿದ್ದ ಸಾಲ ತೀರಿಸಲು ತನ್ನ ಪತ್ನಿಯನ್ನೇ ಸ್ನೇಹಿತರಿಗೆ ನೀಡಿದ ಘಟನೆ ರಾಜಸ್ಥಾನದ ಸಿಖರ್‌ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

2010ರಲ್ಲಿ ಜೈಪುರದ ಯುವಕನೊಬ್ಬನ ಜೊತೆ ಮಹಿಳೆಯ ಮದುವೆಯಾಗಿತ್ತು. ಮದುವೆ ವೇಳೆ 5 ಲಕ್ಷ ರೂ ಹಾಗೂ ಬಂಗಾರವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೂ ಪತಿಯ ಮನೆಯವರು ವರದಕ್ಷಿಣೆ ತರುವಂತೆ ಆಗಾಗ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೆ ಪತಿಗೆ ಕುಡಿತದ ಅಭ್ಯಾಸವಿದ್ದು ಎಲ್ಲೆಡೆ ಸಾಲ ಮಾಡಿಕೊಂಡಿದ್ದನು. ಸಾಲ ತೀರಿಸಲಾಗದೆ ಪತ್ನಿಯನ್ನು ಸ್ನೇಹಿತರಿಗೆ ಅಡವಿಟ್ಟಿದ್ದಾಗಿ ಮಹಿಳೆ ಆರೋಪಿಸಿದ್ದಾಳೆ.

ಪತಿಯ ಸ್ನೇಹಿತರು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ನಶೆ ಬರುವ ಔಷಧವನ್ನು ನೀಡುತ್ತಿದ್ದರು. ಅಷ್ಟಾದರೂ ಪತ್ನಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಅನಾಥಾಶ್ರಮಕ್ಕೆ ಬಿಟ್ಟು ಹೋಗಿದ್ದ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಪತಿಗಾಗಿ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com