ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಹಿಂದೂ ದೇವರಂತೆ …!

ಇಸ್ಲಾಮಾಬಾದ್‌ : ಪಾಕಿಸ್ತಾನದ ಮಾಜಿ ಕ್ರಿಕೆಟರ್‌ ಹಾಗೂ ಪಾಕಿಸ್ತಾನ ತೆಹ್ರಿಕ್‌ ಎ ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರನ್ನು ಹಿಂದೂಗಳ ದೇವರಾದ ಶಿವನಿಗೆ ಹೋಲಿಸಲಾಗಿದ್ದು, ಈ ಚಿತ್ರ ಎಲ್ಲೆಡೆ ವಿವಾದಕ್ಕೆ ಕಾರಣವಾಗಿದೆ.

ಈ ಚಿತ್ರವನ್ನು ನೋಡಿದ ಹಿಂದೂಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಮ್ರಾನ್‌ ಖಾನ್‌ ಹಿಂದೂಗಳ ದೇವರಂತೆ ಕಾಣುವಂತೆ ಬಿಂಬಿಸಲಾಗುತ್ತಿರುವ ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಡುತ್ತಿರುವವರನ್ನು ಬಂಧಿಸುವಂತೆ ಗೃಹ ಸಚಿವಾಲಯ ಆದೇಶಿಸಿದೆ.

ಮೊದಲ ಬಾರಿಗೆ ಪಿಎಂಎಲ್‌ -ಎನ್‌ ಬೆಂಬಲಿಗರು ಎಂಬ ಫೇಸ್‌ಬುಕ್‌ ಪೇಜ್‌ನಿಂದ ಏಪ್ರಿಲ್‌ 8ರಂದು ಈ ಫೋಟೋವನ್ನು ಪ್ರಕಿಟಿಸಲಾಗಿತ್ತು. ಇದಕ್ಕೆ, ನಾವು ನವಾಜ್ ಷರೀಫ್‌, ಶಹಬಾಜ್‌ ಷರೀಫ್‌ ಹಾಗೂ ಪಿಎಂಎಲ್‌ -ಎನ್‌ ಅವರ ಅಭಿಮಾನಿಗಳು ಎಂಬ ಶೀರ್ಷಿಕೆ ನೀಡಲಾಗಿತ್ತು.

ಇದಕ್ಕೆ ಪಾಕಿಸ್ತಾನದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಫೇಸ್‌ಬುಕ್‌ ಪೇಜ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಯಾವ ಉದ್ದೇಶಕ್ಕಾಗಿ ಈ ಫೋಟೋವನ್ನು ತಿರುಚಲಾಗಿದೆ ಎಂಬುದರ ಬಗ್ಗೆ ತಿಳಿದುಬಂದಿಲ್ಲ.

 

 

 

Leave a Reply

Your email address will not be published.