ವಿನಯ್‌ ಕುಲಕರ್ಣಿಗೆ ತಕ್ಕ ಪಾಠ ಕಲಿಸದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ : BSY

ಧಾರವಾಡ : ಯೋಗೀಶ್‌ ಗೌಡ್ ಕೊಲೆಗಡುಕರನ್ನ ಎಲ್ಲಿಗೆ ಮುಟ್ಟಿಸಬೇಕು ಅಲ್ಲಿ‌‌ ಮುಟ್ಟಿಸದೇ ಇದ್ರೆ ನನ್ನ ಹೆಸರು ಯಡಿಯೂರಪ್ಪ ಅಲ್ಲ ಎಂದು ಮಾಜಿ ಸಿಎಂ ಬಿಎಸ್‌ವೈ ಗುಡುಗಿದ್ದಾರೆ.

ಧಾರವಾಡದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಜಿಲ್ಲೆಯ ಎಲ್ಲಾ ವಿಧಾನಸಭೆಯಲ್ಲೂ ಗೆಲ್ಲಬೇಕು.  ರೈತರ ಕೊಲೆ ಮಾಡಿದ ಕೊಲೆಗಡುಕ ಸರ್ಕಾರ ಈ ಕಾಂಗ್ರೆಸ್‌ ಸರ್ಕಾರ.  25 ಜನ ಹಿಂದು‌ಗಳ ಕೊಲೆ ಮಾಡಿದ ಸರ್ಕಾರ ಮನೆಗೆ ಹೋಗಬೇಕು. ಸಿಎಂ ಸಿದ್ಧರಾಮಯ್ಯನವರ ಪಾಪದ‌ ಕೊಡ ತುಂಬಿದೆ.  ಭ್ರಷ್ಟ ಕಾಂಗ್ರೆಸ್ ಪಕ್ಷ ಕಿತ್ತೊಗೆಯಬೇಕು. ರಾಜ್ಯದಲ್ಲಿ ವಿದ್ಯುತ್ ಇಲ್ಲ, ನಾನು ದಿನಕ್ಕೆ 12 ಗಂಟೆ ವಿದ್ಯುತ್ ಕೊಡುತ್ತೇನೆ. ಜನಹಿತ ಭ್ರಷ್ಟ ಸರ್ಕಾರದ ಸಿಎಂ ಹಾಗೂ ಪರಮೇಶ್ವರ ಒಂದು ದಿಕ್ಕಿಗೆ ಹೋಗ್ತಾ ಇದಾರೆ. ಗೂಂಡಾಗಿರಿ ಮಾಡೋ ವಿನಯ್ ಕುಲಕರ್ಣಿ ಇನ್ನು 30 ದಿನ ಮಾತ್ರ ಇರುವುದು ಎಂದಿದ್ದಾರೆ.

ವಿನಯ್‌ ಕುಲಕರ್ಣಿಗೆ ತಕ್ಕಪಾಠ ಕಲಿಸದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ ಎಂದಿರುವ ಬಿಎಸ್‌ವೈ,  ಹಣ ಬಲದಿಂದ ಚುನಾವಣೆ ಗೆಲ್ತೇನೆ ಅನ್ನೊ ಭ್ರಮೆ ಸರ್ಕಾರಕ್ಕೆ ಇದೆ. ಕಾಂಗ್ರೆಸ್ ಅಮಿತ್‌ ಷಾ, ಪ್ರಧಾನಿ  ಮೋದಿ, ಕಾಂಗ್ರೆಸ್ ವಿರುದ್ದ ಉಪವಾಸ ಮಾಡಿದ್ದಾರೆ. ಕಣ್ಣೀರು ಹಾಕಿದ ಯೋಗೀಶ್‌ಗೌಡ ತಾಯಿಗೆ ನ್ಯಾಯ ಕೊಡಿಸಬೇಕು, ನಮ್ಮ ಮನೆಯಲ್ಲಿ ಯಾರಾದ್ರು ಕಣ್ಣಿರು ಹಾಕಿದ್ರೆ ನೋಡಿಕೊಂಡು ಸುಮ್ಮನೆ ಇರುತ್ತಿದ್ದೆವಾ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.