ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಶ್ರೀದೇವಿಗೆ ಅತ್ಯುತ್ತಮ ನಟಿ, ವಿನೋದ್ ಖನ್ನಾಗೆ ಫಾಲ್ಕೆ

ದೆಹಲಿ : 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಲಾಗಿದ್ದು. ಕನ್ನಡದ ಹೆಬ್ಬೆಟ್ಟು ರಾಮಕ್ಕ ಸಿನಿಮಾಗೆ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಲಭಿಸಿದೆ.

ಈ ಬಾರಿಯ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಖಾಯತ ನಿರ್ದೇಶಕ ಶೇಖರ್‌ ಕಪೂರ್‌ ಕಾರ್ಯನಿರ್ವಹಿಸಿದ್ದು, ಹತ್ತು ಮಂದಿ ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಚಿತ್ರಕಥೆಗಾರ ಇಮ್ತಿಯಾಜ್ ಹುಸೇನ್‌, ಗೀತಸಾಹಿತಿ ಮೆಹಬೂಬ್‌, ನಟಿ ಗೌತಮಿ, ಕನ್ನಡದ ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ, ಅನಿರುದ್‌ ರಾಯ್‌ ಚೌಧರಿ, ರಾಜೇಶ್‌ ಪುಷ್ಕರ್‌, ರಂಜಿತ್‌ ದಾಸ್‌, ತ್ರಿಪುರಾರಿ ಶರ್ಮಾ ಹಾಗೂ ರುಮಿ ಜಾಫ್ರಿ ಇದ್ದರು.

ದಿವಂಗತ ನಟಿ ಶ್ರೀದೇವಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದ್ದು, ನಟ ವಿನೋದ್ ಖನ್ನಾ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಮನರಂಜನಾ ಕ್ಷೇತ್ರದಲ್ಲಿ ಬಾಹುಬಲಿ ಸಿನಿಮಾಗೆ ಅತ್ಯುತ್ತಮ ಚಲನ ಚಿತ್ರ ಪ್ರಶಸ್ತಿ ಲಭಿಸಿದೆ. ಇನ್ನು ಅತ್ಯುತ್ತಮ ಹಾಡುಗಾರಿಕೆ ವಿಭಾಗದಲ್ಲಿ ಖ್ಯಾತ ಗಾಯಕ ಯೇಸುದಾಸ್‌ ಪ್ರಶಸ್ತಿಗೆ ಭಾಜನರಾಗಿದ್ದರೆ, ಅತ್ಯುತ್ತಮ ಮಹಿಳಾ ಹಾಡುಗಾರ್ತಿಯಾಗಿ ಸಷಾ ತಿರುಪತಿ ಹೊರಹೊಮ್ಮಿದ್ದಾರೆ.  ಬೆಸ್ಟ್‌ ಸಂಗೀತ ನಿರ್ದೇಶಕರಾಗಿ ಮಣಿರತ್ನಂ ಅವರಿಗೆ ಪ್ರಶಸ್ತಿ ಲಭಿಸಿದೆ.

ರುಸ್ತುಂ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಅಕ್ಷಯ್‌ ಕುಮಾರ್‌ ಅವರಿಗೆ ಬೆಸ್ಟ್‌ ಆ್ಯಕ್ಟರ್‌ ಪ್ರಶಸ್ತಿ ಲಭಿಸಿದೆ. ಮೇ 3ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com