CWG 2018 : ಶೂಟಿಂಗ್ : ತೇಜಸ್ವಿನಿಗೆ ಸ್ವರ್ಣ ಪದಕ, ಬೆಳ್ಳಿ ಗೆದ್ದ ಅಂಜುಮ್ ಮೌದ್ಗಿಲ್

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಗರದಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಲಭಿಸಿವೆ. ಶುಕ್ರವಾರ ನಡೆದ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಭಾರತದ ತೇಜಸ್ವಿನಿ ಸಾವಂತ್ ಚಿನ್ನದ ಪದಕವನ್ನು ಜಯಿಸಿದ್ದಾರೆ.

457.9 ಪಾಯಿಂಟ್ಸ್ ಸ್ಕೋರ್ ಮಾಡಿದ ತೇಜಸ್ವಿನಿ ಸಾವಂತ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. 455.7 ಪಾಯಿಂಟ್ಸ್ ಗಳಿಸಿದ ಎರಡನೇ ಸ್ಥಾನ ಪಡೆದ ಭಾರತದ ಮತ್ತೋರ್ವ ಮಹಿಳಾ ಶೂಟರ್ ಅಂಜುಮ್ ಮೌದ್ಗಿಲ್ ರಜತ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದು ಪ್ರಸಕ್ತ ಕ್ರೀಡಾಕೂಟದಲ್ಲಿ ತೇಜಸ್ವಿನಿ ಸಾವಂತ್ ಜಯಿಸಿದ ಎರಡನೇ ಪದಕವಾಗಿದ್ದು, ಇದಕ್ಕೂ ಮುನ್ನ ತೇಜಸ್ವಿನಿ ಸಾವಂತ್ ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ಶೂಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು.

One thought on “CWG 2018 : ಶೂಟಿಂಗ್ : ತೇಜಸ್ವಿನಿಗೆ ಸ್ವರ್ಣ ಪದಕ, ಬೆಳ್ಳಿ ಗೆದ್ದ ಅಂಜುಮ್ ಮೌದ್ಗಿಲ್

Leave a Reply

Your email address will not be published.

Social Media Auto Publish Powered By : XYZScripts.com