ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದ ನಟಿ ಶ್ರೀರೆಡ್ಡಿಗೆ ಶಹಬ್ಬಾಶ್‌ಗಿರಿ ನೀಡಿದ ರಾಂ ಗೋಪಾಲ್ ವರ್ಮಾ

ಇತ್ತೀಚೆಗಷ್ಟೇ ಕಾಸ್ಟಿಂಗ್‌ ಕೌಚ್‌ ವಿರುದ್ಧ ಪ್ರತಿಭಟಿಸಿದ್ದ ತೆಲುಗು ನಟಿ ಶ್ರೀರೆಡ್ಡಿ ಭಾರೀ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ್ದಾರೆ. ಅವರಿಗೆ ಅಷ್ಟರ ಮಟ್ಟಿಗೆ ವಿರೋಧ ವ್ಯಕ್ತವಾಗುತ್ತಿದೆಯೋ ಅಷ್ಟೇ ಬೆಂಬಲವೂ ಸಿಗುತ್ತಿದೆ.

ಅರೆನಗ್ನವಾಗಿ ಪ್ರತಿಭಟಿಸಿದ್ದ ಈ ನಟಿಯ ಕುರಿತು ವಿವಾದಿತ ನಿರ್ದೇಶಕ ರಾಂ ಗೋಪಾಲ್‌ ವರ್ಮಾ ಬೆಂಬಲ ಸೂಚಿಸಿದ್ದಾರೆ. ಶ್ರೀರೆಡ್ಡಿಯ ನೇರ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಂ ಗೋಪಾಲ್‌ ವರ್ಮಾ, ಈಕೆ ಬಗ್ಗೆ ಅವರ ತಾಯಿ ಹೆಮ್ಮೆ ಪಡಬೇಕು ಎಂದಿದ್ದಾರೆ.

ಕಾಸ್ಟಿಂಗ್‌ ಕೌಚ್ ಇತ್ತೀಚಿಗಿನ ವಿಷಯವಲ್ಲ. ಸಿನಿಮಾ ಆರಂಭವಾದಾಗಿನಿಂದಲೂ ಇದೆ. ಆದರೆ ಇಷ್ಟು ವರ್ಷದಲ್ಲಿ ಈ ಮಟ್ಟಿಗೆ ಪ್ರತಿಭಟನೆ ಮಾಡಿದ ಇತಿಹಾಸವಿರಲಿಲ್ಲ. ಶ್ರೀರೆಡ್ಡಿ ಗಟ್ಟಿತನಕ್ಕೆ ಸೆಲ್ಯೂಟ್ ಹೊಡೆಯಲೇ ಬೇಕು ಎಂದಿದ್ದಾರೆ.

ಶ್ರೀರೆಡ್ಡಿ ಕುರಿತು ಅವರ ತಾಯಿ ಹೆಮ್ಮೆ ಪಡಬೇಕು. ಸಾಮಾನ್ಯ ನಟಿಯರು ಚಿತ್ರರಂಗಕ್ಕೆ ಬರಬೇಕಾದರೆ ಈಗ ಶ್ರೀರೆಡ್ಡಿ ಮಾಡಿರುವ ಸಾಧನೆ ದೊಡ್ಡದು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com