ನಿಂತಿದ್ದ ಕಂಟೈನರ್‌ಗೆ ಗೂಡ್ಸ್‌ ಲಾರಿ ಡಿಕ್ಕಿ : ಬೆಂಕಿಯ ಕೆನ್ನಾಲಿಗೆಗೆ ಇಬ್ಬರ ಬಲಿ

ಬೆಂಗಳೂರು : ರಸ್ತೆ ಬದಿ ನಿಂತಿದ್ದ ಕಂಟೈನರ್‌ ವಾಹನಕ್ಕೆ ಗೂಡ್ಸ್‌ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆ ಚೆಕ್‌ಪೋಸ್ಟ್ ಬಳಿ ಈ ಘಟನೆ  ನಡೆದಿದೆ.

ಮೃತರಿಬ್ಬರೂ ತಮಿಳುನಾಡು ಮೂಲದವರಾಗಿದ್ದು, ಒಬ್ಬರ ಹೆಸರು ವೇಲುಮುರುಗನ್‌ ಎಂದು ಹೆಸರಿಸಲಾಗಿದೆ. ಇನ್ನೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಗುರುವಾರ ಮಧ್ಯರಾತ್ರಿ ಘಟನೆ ಸಂಭವಿಸಿದ್ದು, ಡಿಕ್ಕಿ ಹೊಡೆದ ಕೂಡಲೆ ಎರಡೂ ವಾಹನಗಳಿಗೂ ಬೆಂಕಿ ಆವರಿಸಿದ್ದು, ಕ್ಷಣಾರ್ಧದಲ್ಲೇ ಇಬ್ಬರು ಸುಟ್ಟು ಕರಕಲಾಗಿದ್ದಾರೆ.

ಕಂಟೈನರ್‌ ವಾಹನದಲ್ಲಿ ರಸಾಯನಿಕವನ್ನು ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ತಿಳಿದುಬಂದಿದೆ.

ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com