ಈ ಸಿದ್ದರಾಮಯ್ಯ ಎಲ್ಲೇ ಸ್ಪರ್ಧೆ ಮಾಡಿದ್ರೂ ಸೋಲು ಖಚಿತ : ಯಡಿಯೂರಪ್ಪ

ಬಾಗಲಕೋಟೆ : ಚುನಾವಣೆಗೆ ಇನ್ನು 289 ದಿನ ಮಾತ್ರ ಬಾಕಿ ಇದೆ. ಇಡೀ ರಾಜ್ಯ ಸುತ್ತಿದ್ದೇನೆ. 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಎನ್ನುವ ಕಾಲ ಬಹಳ ಹತ್ತಿರದಲ್ಲಿದೆ ಎಂದು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಸೋಲುವ ಹತಾಶೆಯಲ್ಲಿರುವ ಸಿದ್ದರಾಮಯ್ಯ ಮನ ಬಂದಂತೆ ಮಾತನಾಡುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಖಚಿತ ಎಂದು ಬಾದಾಮಿಗೆ ಹೋಗಿದ್ದಾರೆ. ಎಲ್ಲಿಯೇ ಸ್ಪರ್ಧೆ ಮಾಡಲಿ ಸಿಎಂಗೆ ಸೋಲು ಖಚಿತ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಮುಳುಗುತ್ರಿರುವ ಹಡಗು ಎಂದಿರುವ ಬಿಎಸ್‌ವೈ, ಮುಳುಗುವ ಹಡಗನ್ನು ಯಾರೂ ಹತ್ತಲಿಕ್ಕೆ ಸಾಧ್ಯವಿಲ್ಲ. ಹಣದ ಬಲ ಹೆಂಡದ ಬಲ, ಜಾತಿ ವಿಷಬೀಜ ಬಿತ್ತಿ ಅಧಿಕಾರ ಹಿಡಿಯುವ ಭ್ರಮೆಯಲ್ಲಿದ್ದಾರೆ. ಆ ಭ್ರಮೆ ಕಿತ್ತೊಗೆಯಬೇಕಾಗಿದೆ ಎಂದಿದ್ದಾರೆ.

8 thoughts on “ಈ ಸಿದ್ದರಾಮಯ್ಯ ಎಲ್ಲೇ ಸ್ಪರ್ಧೆ ಮಾಡಿದ್ರೂ ಸೋಲು ಖಚಿತ : ಯಡಿಯೂರಪ್ಪ

Leave a Reply

Your email address will not be published.

Social Media Auto Publish Powered By : XYZScripts.com