CWG 2018 : ಚಿನ್ನ ಗೆದ್ದ ಭಾರತದ ಅನೀಶ್ ಭನ್ವಾಲಾ : ದಾಖಲೆ ಬರೆದ 15 ವರ್ಷದ ಶೂಟರ್

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅನೀಶ್ ಭನ್ವಾಲಾ ಚಿನ್ನದ ಪದಕ ಗೆದ್ದಿದ್ದಾರೆ. ಶುಕ್ರವಾರ ನಡೆದ ಪುರುಷರ 25 ರ್ಯಾಪಿಡ್ ಫೈರ್ ಪಿಸ್ಟಲ್ ಸ್ಪರ್ಧೆಯಲ್ಲಿ 30 ಪಾಯಿಂಟ್ ಸ್ಕೋರ್ ಮಾಡಿದ 15 ವರ್ಷದ ಅನೀಶ್ ಬಂಗಾರವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದರೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಚಿನ್ನದ ಪದಕ ಗೆದ್ದ ಅತಿ ಕಿರಿಯ ವಯಸ್ಸಿನ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಅನೀಶ್ ಭನ್ವಾಲಾ ಪಾತ್ರರಾಗಿದ್ದಾರೆ.

28 ಪಾಯಿಂಟ್ ಗಳಿಸಿದ ಆಸ್ಟ್ರೇಲಿಯಾದ ಸೆರ್ಗೆಯಿ ಎವ್ಗ್ಲೆಸ್ಕಿ ಬೆಳ್ಳಿ ಪದಕ ಹಾಗೂ 17 ಪಾಯಿಂಟ್ ಗಳಿಸಿದ ಇಂಗ್ಲೆಂಡಿನ ಸ್ಯಾಮ್ ಗೋವಿನ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

 

6 thoughts on “CWG 2018 : ಚಿನ್ನ ಗೆದ್ದ ಭಾರತದ ಅನೀಶ್ ಭನ್ವಾಲಾ : ದಾಖಲೆ ಬರೆದ 15 ವರ್ಷದ ಶೂಟರ್

Leave a Reply

Your email address will not be published.