CWG 2018 : ಫ್ರೀಸ್ಟೈಲ್ ಕುಸ್ತಿಯಲ್ಲಿ ಚಿನ್ನ ಗೆದ್ದ ಸುಶೀಲ್ ಕುಮಾರ್, ರಾಹುಲ್ ಅವಾರೆ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳು ಬಂದಿವೆ. ಪುರುಷರ 74 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಸುಶೀಲ್ ಕುಮಾರ್ ಚಿನ್ನದ ಪದಕವನ್ನು ಜಯಿಸಿದ್ದಾರೆ.

ಕರಾರಾ ಸ್ಪೋರ್ಟ್ಸ್ ಅರೆನಾದಲ್ಲಿ ಗುರುವಾರ ನಡೆದ ಫೈನಲ್ ನಲ್ಲಿ ಭಾರತದ ಸುಶೀಲ್ ಕುಮಾರ್ ದಕ್ಷಿಣ ಆಪ್ರಿಕಾದ ಜೋಹಾನೆಸ್ ಬೋಥಾ ಅವರನ್ನು 10-0 ಪಾಯಿಂಟ್ ಗಳಿಂದ ಮಣಿಸಿದರು.

ಇದಕ್ಕೂ ಮುನ್ನ ಗುರುವಾರ ಭಾರತದ ಮತ್ತೋರ್ವ ಕುಸ್ತಿ ಪಟು ರಾಹುಲ್ ಬಾಳಾಸಾಹೇಬ್ ಅವರೆ , ಪುರುಷರ 57 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 2011 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಾರಾಷ್ಟ್ರದ ರಾಹುಲ್ ಅವರೆ ಕಂಚಿನ ಪದಕ ಜಯಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com