ರೈತರ ಆತ್ಮಹತ್ಯೆಗೆ ಮಾತ್ರ ಮೋದಿ ಏಕೆ ಉಪವಾಸ ಸತ್ಯಾಗ್ರಹ ಮಾಡಲ್ಲ : ಓವೈಸಿ

ಹೈದರಾಬಾದ್‌ : ಸಂಸತ್ ಕಲಾಪ ನಡೆಸಲು ವಿಪಕ್ಷಗಳು ಅವಕಾಶ ಮಾಡಿಕೊಡಲಿಲ್ಲ ಎಂಬ ಕಾರಣ ಪ್ರಧಾನಿ ಮೋದಿ ನೇತೃತ್ವದ ತಂಡ ಉಪವಾಸ ಸತ್ಯಾಗ್ರಹ ಆರಂಭಿಸಿದೆ. ಅದೇ ರೈತ ರ ಆತ್ಮಹತ್ಯೆ ಕುರಿತು ಯಾಕೆ  ಉಪವಾಸ ಮಾಡಲಿಲ್ಲ ಎಂದು ಎಐಎಂಐಎಂ ಪಕ್ಷದ ಅಧ್ಯರ್ಷ ಅಸಾದುದ್ದೀನ್‌ ಓವೈಸಿ ಪ್ರಶ್ನಿಸಿದ್ದಾರೆ.
ಕೇವಲ ಕಲಾಪ ವ್ಯರ್ಥವಾಗಿದ್ದಕ್ಕೆ ಉಪವಾಸ ಮಾಡುತ್ತಿರುವ ಮೋದಿ,ಅದೇ ತಮ್ಮ ಭರವಸೆ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಸಾವಿರಾರು ರೈತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂತಹವರಿಗಾಗಿ ಏಕೆ ಉಪವಾಸ ಸತ್ಯಾಗ್ರಹ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ರೈತರಿಗಾಗಿ ಉಪವಾಸವಿರದ ಮೋದಿ, ಉತ್ತರ ಭಾರತದ ದಲಿತರ ವಿರುದ್ಧದ ದೌರ್ಜನ್ಯದ ವಿರುದ್ಧ ಸತ್ಯಾಗ್ರಹ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಅವರ ನಿಲುವೇನು, ಬಿಜೆಪಿ ನಿಲುವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published.