CWG 2018 : ಶೂಟಿಂಗ್ : ಬೆಳ್ಳಿ ಪದಕ ಗೆದ್ದ ತೇಜಸ್ವಿನಿ ಸಾವಂತ್

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಗರದಲ್ಲಿ ನಡೆಯುತ್ತಿರವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದೆ. ಗುರುವಾರ ನಡೆದ ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಭಾರತದ ತೇಜಸ್ವಿನಿ ಸಾವಂತ್ ರಜತ ಪದಕವನ್ನು ಜಯಿಸಿದ್ದಾರೆ.

ಇದು ಪ್ರಸಕ್ತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ದಕ್ಕಿದ 6ನೇ ಬೆಳ್ಳಿ ಪದಕವಾಗಿದೆ. ಸಿಂಗಾಪುರದ ಮಾರ್ಟಿನ್ ಲಿಂಡ್ಸೆ ವೆಲೋಸೊ ಚಿನ್ನದ ಪದಕ ಗೆದ್ದರೆ, ಸ್ಕಾಂಟ್ಲೆಂಡಿನ ಸಿಯೋನಾಯ್ಡ್ ಮೆಕಿಂಟೋಶ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

2006ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತೇಜಸ್ವಿನಿ ಸಾವಂತ್ ಬಂಗಾರದ ಪದಕವನ್ನು ಗೆದ್ದಿದ್ದರು. 2010 ರಲ್ಲಿ ನಡೆದ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ತೇಜಸ್ವಿನಿ ಚಿನ್ನ ಗೆದ್ದ ಪ್ರಥಮ ಭಾರತೀಯ ಶೂಟರ್ ಎನಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com